ಮುಂಬೈ, ಫೆ 15 (DaijiworldNews/DB): ಇತ್ತೀಚೆಗೆ ಕೆಲವೊಂದು ನಟಿಯರು ತಮಗಿರುವ ವಿಚಿತ್ರ ಕಾಯಿಲೆಗಳ ಬಗ್ಗೆ ಸಂಕೋಚವಿಲ್ಲದೇ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಕಾಯಿಲೆಗಳಿಗೆ ಚಿಕಿತ್ಸೆನೂ ಪಡೆದುಕೊಳ್ಳುತ್ತಿದ್ದಾರೆ. ಇದೀಗ ನಟಿ ಅನುಷ್ಕಾ ಶೆಟ್ಟಿಯೂ ತಮಗಿರುವ ವಿಚಿತ್ರ ಕಾಯಿಲೆಯೊಂದರ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಅರೆ! ಮುದ್ದಾದ ಮೊಗದ ಚೆಲುವೆಗೆ ಅದೆಂತಾ ದೊಡ್ಡ ಕಾಯಿಲೆ ಬಂದಿದೆ ಎಂದು ಅಭಿಮಾನಿಗಳೂ ವಿಚಲಿತರಾಗಿದ್ದಾರೆ. ಆದರೆ ಸ್ವೀಟಿಗೆ ಇರೋದು ನಗುವ ಕಾಯಿಲೆಯಂತೆ. ತನಗೆ ನಗುವ ಕಾಯಿಲೆ ಇದೆ ಎಂದು ಅನುಷ್ಕಾ ಶೆಟ್ಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿ ಒಮ್ಮೆ ನಗಲು ಶುರು ಮಾಡಿದರೆ 5 ರಿಂದ 20 ನಿಮಿಷ ನಗುತ್ತಲೇ ಇರುತ್ತಾರಂತೆ. ವಿಶೇಷವಾಗಿ ಶೂಟಿಂಗ್ ಸಮಯದಲ್ಲಿ ಒಮ್ಮೆ ನಗಲಾರಂಭಿಸಿದರೆ ಎಲ್ಲರೂ ತಮ್ಮ ಕೆಲಸ ನಿಲ್ಲಿಸಿ ಅನುಷ್ಕಾಳೆಡೆಗೇ ನೋಡುತ್ತಾ ನಿಂತಿರುತ್ತಾರಂತೆ. ಫನ್ನಿ ಘಟನೆ ನೆನಪಾದರೆ, ಯಾರಾದರೂ ಕಾಮಿಡಿ ಮಾಡಿದರೆ ನಗು ಕಂಟ್ರೋಲ್ಗೇ ಸಿಗುವುದಿಲ್ಲ ಎನ್ನುತ್ತಾರೆ ಅನುಷ್ಕಾ.