ಹೈದರಾಬಾದ್, ಫೆ 11 (DaijiworldNews/DB): ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಪ್ರತಿ ಬಾರಿಯೂ ಸುದ್ದಿಯಲ್ಲಿರುವ ನಟಿ. ಸಿನಿಮಾಗಿಂತಲೂ ಹೆಚ್ಚು ವೈಯಕ್ತಿಕ ವಿಚಾರದಲ್ಲಿಯೇ ಆಗಾಗ ರಶ್ಮಿಕಾರ ಕಾಲೆಳೆಯುತ್ತಿರುವ ನೆಟ್ಟಿಗರು ಇದೀಗ ಆಕೆ ಧರಿಸಿರುವ ಟಾಪ್ ವಿಚಾರವಾಗಿ ಕಾಲೆಳೆದಿದ್ದಾರೆ.
ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಜೀನ್ಸ್ ಪ್ಯಾಂಟ್ ಮತ್ತು ಪೀಚ್ ಬಣ್ಣದ ಲಾಂಗ್ ಸ್ಲೀವ್ ಟಾಪ್ ಧರಿಸಿ ರಶ್ಮಿಕಾ ಆಗಮಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆ ರಶ್ಮಿಕಾ ಧರಿಸಿದ್ದ ಟಾಪ್ ಬೆಲೆ 2 ಲಕ್ಷ ರೂಪಾಯಿ ಎಂಬುದು ಚರ್ಚೆಗೆ ಗ್ರಾಸವಾದ ವಿಚಾರ.
Dolce & Gabbana ಹೆಸರಿನ ಟಾಪ್ ಎರಡು ಲಕ್ಷ ರೂ. ಬೆಲೆ ಬಾಳುವಂತದ್ದು ಎನ್ನಲಾಗಿದ್ದು, ಇದರ ಸ್ಕ್ರೀನ್ಶಾಟ್ನ್ನು ಕೂಡಾ ನೆಟ್ಟಿಗರೊಬ್ಬರು ಹಾಕಿದ್ದಾರೆ. ಇದು ರಶ್ಮಿಕಾ ಕಾಲೆಳೆಯಲು ಕಾರಣವಾಗಿದೆ. ಈ ಟಾಪ್ ನೆಲ ಒರೆಸುವ ಬಟ್ಟೆಯಂತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.