ಮುಂಬೈ, ಫೆ 10 (DaijiworldNews/DB): ಬಾಲಿವುಡ್ ನಟಿ ಕಾಜೊಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಇಂಟ್ರೆಸ್ಟಿಂಗ್ ವಿಚಾರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮ ಬಣ್ಣದ ಹಿಂದಿನ ಸ್ವಾರಸ್ಯದ ಬಗ್ಗೆ ಪೋಸ್ಟ್ ಹಾಕಿ ಕುತೂಹಲ ಹೆಚ್ಚಿಸಿದ್ದಾರೆ.
ಹೌದು. ಚಿತ್ರರಂಗಕ್ಕೆ ಕಾಲಿಡುವಾಗ ಗೋಧಿ ಬಣ್ಣದ್ದಲ್ಲಿದ್ದ ಕಾಜೊಲ್ ಬಳಿಕ ಬಿಳಿಯಾದ ತ್ವಚೆಯನ್ನು ಪಡೆದಿದ್ದರು. ಇದಕ್ಕೆ ನೆಟ್ಟಿಗರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ನೀವು ಇಷ್ಟು ಬಿಳಿಯಾಗಲು ಕಾರಣವೇನೆಂದು ಆಗಾಗ ಅಭಿಮಾನಿಗಳು ಕಾಜೊಲ್ರನ್ನು ಪ್ರಶ್ನಿಸುತ್ತಿದ್ದರು. ಆದರೆ ಕಾಜೊಲ್ ಮಾತ್ರ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುವ ಗೋಜಿಗೇ ಹೋಗುತ್ತಿರಲಿಲ್ಲ. ಇದೀಗ ತಮ್ಮ ಬೆಳ್ಳಗಿನ ತ್ವಚೆಯ ಹಿಂದಿನ ಸ್ವಾರಸ್ಯಕರ ಕಾರಣವನ್ನು ಕಾಜೊಲ್ ಬಿಚ್ಚಿಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಕಾಜೊಲ್ ಪೋಸ್ಟ್ವೊಂದನ್ನು ಹಾಕಿದ್ದಾರೆ. ಅದರಲ್ಲಿ ಕಪ್ಪು ಬಣ್ಣದ ಬಟ್ಟೆಯಿಂದ ತಮ್ಮ ಮುಖವನ್ನು ಸಂಪೂರ್ಣ ಮುಚ್ಚಿಕೊಂಡಿದ್ದಾರೆ. ಕಣ್ಣಿಗೆ ಸನ್ಗ್ಲಾಸ್ ಹಾಕಿದ್ದಾರೆ. ಫೋಟೋಗೆ ನಾನು ಹೇಗೆ ಬಿಳಿಯಾಗಿದ್ದೇನೆಂದು ಪ್ರಶ್ನಿಸುವ ಎಲ್ಲರಿಗೂ ಒಂದು ಕ್ಯಾಪ್ಶನ್ ನೀಡಿದ್ದಾರೆ. ಅಂದರೆ ಮುಖವನ್ನು ಹೊರಗಿನ ಶಾಖದಿಂದ ಮುಚ್ಚಿಕೊಂಡು ಕಣ್ಣಿಗೆ ಸನ್ಗ್ಲಾಸ್ ಧರಿಸಿ ಹೊರಗಡೆ ಓಡಾಡಿದ ಕಾರಣಕ್ಕಾಗಿಯೇ ತನ್ನ ತ್ವಚೆ ಬಿಳಿಯಾಗಿದೆ ಎಂಬುದನ್ನು ಕಾಜಲ್ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.