ಮುಂಬಯಿ, ಫೆ 09 (DaijiworldNews/DB): ಬಾಲಿವುಡ್ ಸ್ಟಾರ್ಗಳಾದ ರವೀನಾ ಟಂಡನ್ ಮತ್ತು ಅಕ್ಷಯ್ಕುಮಾರ್ ಸಂಬಂಧ ನಿಶ್ಚಿತಾರ್ಥವಾದ ಬಳಿಕ ಮುರಿದು ಬಿದ್ದಿತ್ತು. ಬಳಿಕ ಇಬ್ಬರೂ ಬೇರೆ ಬೇರೆ ಮದುವೆಯಾಗಿ ದಾಂಪತ್ಯ ಸಾಗಿಸುತ್ತಿದ್ದಾರೆ.
ಇದೀಗ ಎರಡು ದಶಕಗಳ ಬಳಿಕ ಈ ಸಂಬಂಧದ ವಿಚಾರವಾಗಿ ರವೀನಾ ಮಾತನಾಡಿದ್ದಾರೆ. ಬ್ರೇಕಪ್ ಆಗಿ 20 ವರ್ಷ ಕಳೆದರೂ ಈ ಸಂಬಂಧದ ಕುರಿತು ಇನ್ನೂ ಗೂಗಲ್ನಲ್ಲಿ ಸರ್ಚ್ ಮಾಡುತ್ತಿರುವ ಬಗ್ಗೆ ರವೀನಾ ಅಸಮಾಧಾನ ಹೊರ ಹಾಕಿದ್ದಾರೆ. ಹೌದು. ಎರಡು ದಶಕಗಳ ಹಿಂದೆಯೇ ನಮ್ಮಿಬ್ಬರ ಸಂಬಂಧ ಮುರಿದು ಹೋಗಿದೆ. ಆಮೇಲೆ ನಾವಿಬ್ಬರೂ ಪ್ರತ್ಯೇಕವಾಗಿ ಬೇರೆಯವರ ಜೊತೆ ಡೇಟಿಂಗ್ ಮಾಡಿದ್ದೇವೆ. ಆದರೂ ಇನ್ನೂ ನಮ್ಮ ನಿಶ್ಚಿತಾರ್ಥದ ಬಗ್ಗೆಯೇ ಇನ್ನೂ ಗೂಗಲ್ನಲ್ಲಿ ಸರ್ಚ್ ಮಾಡಲಾಗುತ್ತಿದೆ. ಇಂತಹ ವರ್ತನೆ ಯಾಕೆ ಎಂದು ರವೀನಾ ಪ್ರಶ್ನಿಸಿದ್ದಾರೆ.
ಕಾಲೇಜಿನಲ್ಲಿ ಹುಡುಗಿಯರು ವಾರಕ್ಕೊಮ್ಮೆ ಬಾಯ್ಫ್ರೆಂಡ್ ಬದಲಿಸುತ್ತಾರೆ. ಆದರೆ ನಮ್ಮ ಮುರಿದು ಬಿದ್ದ ನಿಶ್ಚಿತಾರ್ಥದ ಬಗ್ಗೆ ಮಾತ್ರ ಜನ ಇನ್ನೂ ಸರ್ಚ್ ಮಾಡುತ್ತಲೇ ಇದ್ದಾರೆ. ಹಲವರು ವಿಚ್ಚೇದನ ಆಗಿ ಬೇರೆ ಜೀವನ ನೋಡಿದ ಉದಾಹರಣೆ ಇದೆ. ಹಾಗೇ ನಾವೂ ಕೂಡಾ. ಅದರಲ್ಲೇನು ವಿಶೇಷ ಇದೆ ಎಂದವರು ಕೇಳಿದ್ದಾರೆ.