ಮಸ್ಕತ್, ಫೆ 08 (DaijiworldNews/HR): ತುಳು ಸಿನಿಮಾ 'ಮಗನೇ ಮಹಿಷ' ಫೆ.3ರಂದು ಮಸ್ಕತ್ನ ಅಝೈಬಾ ಮಾಲ್ನ ವೊಕ್ಸ್ ಸಿನಿಮಾಸ್ನಲ್ಲಿ ಪ್ರದರ್ಶನಗೊಂಡಿದ್ದು, ಮೂರೂ ಶೋಗಳು ಹೌಸ್ಫುಲ್ ಆಗಿದೆ.
ರಮಾನಂದ ಶೆಟ್ಟಿ, ಸುರೇಂದ್ರ ಅಮೀನ್, ರಾಜೇಂದ್ರ ಶೆಟ್ಟಿ, ಚಂದ್ರೇಶ್ ಪೂಜಾರಿ ಮತ್ತು ಪ್ರವೀಣ್ ಕುಮಾರ್ ಎಕ್ಕಾರ್ ಈ ಸಿನಿಮಾ ಪ್ರದರ್ಶನವನ್ನು ಆಯೋಜಿಸಿದ್ದು, ಗಣೇಶ್ ಶೆಟ್ಟಿ, ಉಮೇಶ್ ಬಂಟ್ವಾಳ, ಸುಜಿತ್ ಎಸ್ ಅಂಚನ್, ಶೇಖರ್ ಶೆಟ್ಟಿ, ಅರುಣ್ ಶೆಟ್ಟಿ ಮಲ್ಲಾರ್ ಮತ್ತು ಪ್ರವೀಣ್ ಕುಮಾರ್ ಎಕ್ಕಾರ್ ಅವರು ಪ್ರದರ್ಶನವನ್ನು ಉದ್ಘಾಟಿಸಿದರು.
ಇನ್ನು ಕಾರ್ಯಕ್ರಮಕ್ಕೆ ಶಶಿಧರ್ ಶೆಟ್ಟಿ ಮಲ್ಲಾರ್, ದಿವಾಕರ ಶೆಟ್ಟಿ ಮಲ್ಲಾರ್, ಗಣೇಶ್ ಶೆಟ್ಟಿ, ಉದಯ ಪೂಜಾರಿ, ಉಮೇಶ್ ಬಂಟ್ವಾಳ, ಎಸ್.ಕೆ.ಪೂಜಾರಿ ಸಹಕರಿಸಿದರು. ಧನು ವ್ಲಾಗ್ಸ್ನ ಧನರಾಜ್ ಶೆಟ್ಟಿ, ಫೋಟೋ ಫ್ಲ್ಯಾಶ್ನ ಸುಕೇಶ್ ಹೆಗ್ಡೆ, ಕೆಆರ್ಪಿ ಮತ್ತು ತೌಳವ ಬೊಲ್ಪು ತಂಡಕ್ಕೆ ಧನ್ಯವಾದ ಅರ್ಪಿಸಲಾಯಿತು.
ಸುಮಾರು 500ಕ್ಕೂ ಹೆಚ್ಚು ಮಂದಿ ಸಿನಿಮಾ ನೋಡಿ ಆನಂದಿಸಿದ್ದಾರೆ.
ನಿರ್ದೇಶಕ ವೀರೇಂದ್ರ ಶೆಟ್ಟಿ ಅವರು ಚಾಲಿಪೋಲಿಲು ಸಿನಿಮಾದ ಮೂಲಕ ಮನೆ ಮಾತಾಗಿದ್ದು, ಇದೀಗ ಅವರ ಎರಡನೇ ತುಳು ಸಿನಿಮಾ 'ಮಗನೇ ಮಹಿಷ ಕೂಡ ಬ್ಲಾಕ್ ಬಸ್ಟರ್ ಆಗಿದೆ.
ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್ ಮತ್ತು ಭೋಜರಾಜ್ ವಾಮಂಜೂರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವೀರೇಂದ್ರ ಶೆಟ್ಟಿ ಚಿತ್ರದ ನಿರ್ದೇಶನದ ಜೊತೆಗೆ ಕಥೆ, ಸಂಭಾಷಣೆ, ಚಿತ್ರಕಥೆ ಬರೆದು ವೀರು ಟಾಕೀಸ್ ಅಡಿಯಲ್ಲಿ ‘ಮಗನೇ ಮಹಿಷ’ ಚಿತ್ರವನ್ನು ನಿರ್ಮಿಸಿದ್ದಾರೆ. ಮನೋಮೂರ್ತಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಸಂದೇಶ್ ನೀರ್ಮಾರ್ಗ, ಪ್ರಶಾಂತ್ ಕಂಕನಾಡಿ ಮತ್ತು ರಕ್ಷಣ್ ಮಾಡೂರು ಹಾಡಿದ್ದಾರೆ.
ಕಳೆದ ವರ್ಷ ಏಪ್ರಿಲ್ 29 ರಂದು ಚಿತ್ರ ಬಿಡುಗಡೆಯಾಗಿತ್ತು.