ಮುಂಬೈ, ಫೆ 07 (DaijiworldNews/HR): ನಟಿ ರಾಖಿ ಸಾವಂತ್ ಅವರು ಮೈಸೂರು ಹುಡುಗ ಆದಿಲ್ ಜೊತೆ ಮದುವೆ ಆಗಿಇದ್ದು, ಇದೀಗ ಅವರ ಸಂಸಾರದಲ್ಲಿ ಬಿರುಕು ಬಿಟ್ಟಿದ್ದು, ಆದಿಲ್ ವಿರುದ್ದ ರಾಖಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ.
ಆದಿಲ್ ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ ಎನ್ನುವ ವಿಚಾರವನ್ನು ರಾಖಿ ಕಣ್ಣಿರಿಡುತ್ತಾ ಹೇಳಿದ್ದರು. ಇಬ್ಬರ ಮಧ್ಯ ಯಾವುದೂ ಸರಿಯಿಲ್ಲ ಎನ್ನುವುದನ್ನು ಹೇಳಿಕೊಂಡಿದ್ದರು. ರಾಖಿ ತಮ್ಮ ಮರ್ಯಾದೆಯನ್ನು ತಗೆಯುತ್ತಿದ್ದಾರೆ ಎಂದು ಆದಿಲ್ ಆರೋಪಿಸಿದ್ದರು.
ಇದೀಗ ಇಬ್ಬರ ಇಬ್ಬರ ಜಗಳ ತಾರಕಕ್ಕೇರಿದ್ದು, ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದೀಗ ಇಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.
ಇನ್ನು ಅವರಿಬ್ಬ ರೆಸ್ಟೋರೆಂಟ್ ವಿಡಿಯೋವೊಂದು ವೈರಲ್ ಆಗಿದ್ದು, ಈ ರೀತಿ ಕಿರಿಕ್ ಮಾಡಿಕೊಂಡಿರುವಾಗ ಪತಿಗೆ ತುತ್ತು ತಿನ್ನಿಸಿದ್ದು ಯಾಕೆ ಎಂಬ ಬಗ್ಗೆ ರಾಖಿ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ. ಮನೆಯಲ್ಲಿ ನಾನು ಅವನಿಗೆ ಯಾವಾಗಲೂ ಊಟ ಮಾಡಿಸುತ್ತಿದ್ದೆ. ಶತ್ರುಗಳು ಮನೆಗೆ ಬಂದಾಗಲೂ ನೀರು ಕೊಡುತ್ತೇವೆ. ಈತ ನನ್ನ ಗಂಡ. ಸಾಯೋ ತನಕ ಅವನನ್ನು ಪ್ರೀತಿಸುತ್ತೇನೆ. ಆದರೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ರಾಖಿ ಹೇಳಿದ್ದಾರೆ.