ಮುಂಬೈ, ಫೆ 05 (DaijiworldNews/HR): ಬಾಲಿವುಡ್ನ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮದುವೆ ಸಂಭ್ರಮ ಶುರುವಾಗಿದ್ದು, ಈ ಜೋಡಿ ನಾಳೆ ಹಸೆಮಣೆ ಏರಲು ರೆಡಿಯಾಗಿದ್ದಾರೆ.
ಕಿಯಾರಾ-ಸಿದ್ಧಾರ್ಥ್ ಜೋಡಿ `ಷೇರ್ಷಾ’ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದು, ಈಗ ಹಲವು ವರ್ಷ ಪ್ರೀತಿಸಿ ಹಸಮಣೆ ಏರಲು ಸಜ್ಜಾಗಿದ್ದಾರೆ.
ಫೆ.6ರಂದು ಸಿದ್ಧಾರ್ಥ್-ಕಿಯಾರಾ ರಾಜಸ್ಥಾನದ ಸೂರ್ಯಗಡನಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ.
ಉನ್ನು ಸಿದ್-ಕಿಯಾರಾ ಮದುವೆಗೆ 100 ಜನ ಅತಿಥಿಗಳನ್ನ ಕರೆಯಲಾಗಿದ್ದು, ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.