ಮುಂಬೈ, ಫೆ 03 (DaijiworldNews/HR): ಬಹು ಬೇಡಿಕೆಯ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಯೊಬ್ಬರಿಗೆ ಪ್ರಪೋಸ್ ಮಾಡೋದು ಹೇಗೆಂದು ಹೇಳಿಕೊಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮ ಒಂದಕ್ಕೆ ತೆರಳಿದ್ದು, ಈ ವೇಳೆ ಅಭಿಮಾನಿ ರಶ್ಮಿಕಾ ಜೊತೆ ಮಾತನಾಡಿದ್ದಾನೆ. ಯಾವುದಾದರೂ ಹುಡುಗಿಗೆ ಪ್ರಪೋಸ್ ಮಾಡಬೇಕು ಎಂದರೆ ತೆಲುಗಿನಲ್ಲಿ ಏನು ಹೇಳಬೇಕು ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸುವಾಗ ರಶ್ಮಿಕಾ ಯಾರಾದರೂ ಇದ್ದಾರಾ? ಎಂದು ನಗುತ್ತಲೇ ಕೇಳಿದ್ದಾರೆ.
ಇನ್ನು ಹೇಳಿ ಏನು ಹೇಳಬೇಕು ಎಂದು ಅಭಿಮಾನಿ ಮತ್ತೆ ಹಿಂದೆ ಬಿದ್ದಾಗ ಇದಕ್ಕೆ ಉತ್ತರಿಸಿದ ರಶ್ಮಿಕಾ ನೀವು ಚೆನ್ನಾಗಿ ಕಾಣುತ್ತಿದ್ದೀರಿ. ಐ ಲವ್ ಯೂ ಎಂದು ಹೇಳಬೇಕು ಎಂಬುದಾಗಿ ಟಿಪ್ಸ್ ನೀಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.