ಬೆಂಗಳೂರು, ಫೆ 01 (DaijiworldNews/HR): ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರ ಮದುವೆಗೂ ಪುನೀತ್ ರಾಜ್ಕುಮಾರ್ ಅವರು ಬದುಕಿರುತ್ತಿದ್ದರೆ ಈ ರೀತಿಯಾಗಿ ಬರುತ್ತಿದ್ದರು ಎಂಬ ಫೋಟೋವೊಂದು ಈಗ ವೈರಲ್ ಆಗಿದೆ.
ಎಲ್ಲರ ನೆಚ್ಚಿನ ಅಪ್ಪು ಯಾರೇ ಮದುವೆ ಕರೆದರೂ ಹಾಜರಾಗುತ್ತಿದ್ದರು. ಪುನೀತ್ ರಾಜ್ಕುಮಾರ್ ಅವರು ಸಿಂಹಪ್ರಿಯರ ಮದುವೆಗೆ ಬಂದಿದ್ದರೆ ಹೇಗಿರುತ್ತಿತ್ತು? ಇಂಥದ್ದೊಂದು ಕಲ್ಪನೆಗೆ ಅಪ್ಪು ಅವರ ಅಭಿಮಾನಿ ಜೀವ ತುಂಬಿದ್ದಾರೆ.
ಇನ್ನು ಬಿಳಿ ಚಿನ್ನದ ಬಣ್ಣದ ಝರಿಯಂಚಿನ ಪಂಚೆ ಹಾಗೂ ಶರ್ಟ್ ಧರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಅಪ್ಪು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆಗೆ ಬಂದಿರುತ್ತಿದ್ದರೆ ಹೀಗಿರುತ್ತಿತ್ತು ಎಂಬ ಕಲ್ಪನೆಯ ಪೋಟೊವೊಂದು ವೈರಕ್ ಆಗಿದ್ದು, ಇದನ್ನು ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.