ಮುಂಬೈ, ಜ 25 (DaijiworldNews/HR): ನಟಿ ಅನುಷ್ಕಾ ಶರ್ಮಾ ಅವರು ಸ್ವಲ್ಪ ಸಣ್ಣ ಬಟ್ಟೆ ಧರಿಸಿದ ಕಾರಣಕ್ಕೆ ಮಗಳ ಬಟ್ಟೆ ಹಾಕಿ ಬಂದಿರಾ ಎಂದು ಅವರನ್ನು ಟ್ರೋಲ್ ಮಾಡಿದ್ದು, ಈ ಪೋಸ್ಟ್ ಇದೀಗ ವೈರಲ್ ಆಗಿದೆ.
ಅನುಷ್ಕಾ ಶರ್ಮಾ ಅವರು ಜನವರಿ 24ರ ರಾತ್ರಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಹಳದಿ ಬಣ್ಣದ ಟಾಪ್ ಹಾಗೂ ಜೀನ್ಸ್ ಧರಿಸಿ ಅವರು ಪೋಸ್ ನೀಡಿದ್ದಾರೆ.
ಇನ್ನು ಅವರ ಹಳದಿ ಬಣ್ಣದ ಡ್ರೆಸ್ ಪೂರ್ತಿ ದೇಹವನ್ನು ಮುಚ್ಚಿಲ್ಲ. ಇದು ಟ್ರೋಲ್ ಮಾಡುವವರ ಕಣ್ಣಿಗೆ ಬಿದ್ದಿದೆ. ಸಿಕ್ಕಿದ್ದೇ ಚಾನ್ಸ್ ಎಂದು ಅವರ ಫೋಟೋಗೆ ಬಗೆಬಗೆಯಲ್ಲಿ ಕಮೆಂಟ್ ಹಾಕಲಾಗುತ್ತಿದೆ.