ಮುಂಬೈ, ಜ 24 (DaijiworldNews/DB): ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ನಿನ್ನೆಯಷ್ಟೇ ಮಹಾರಾಷ್ಟ್ರದ ಖಂಡಾಲಯದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ನವಜೋಡಿಗೆ ಹಲವರಿಂದ ಶುಭಾಶಯಗಳು ಹರಿದು ಬರುತ್ತಿವೆ.
ಇನ್ನು ಅಥಿಯಾ ಶೆಟ್ಟಿ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾ ಹಲವು ಯುವತಿಯರ ಕಣ್ಣು ಸೆಳೆದಿದೆ. ಈ ಲೆಹೆಂಗಾ ಅಂತಿಂತ ಲೆಹೆಂಗಾ ಅಲ್ಲ. ಏಕೆಂದರೆ ಅಥಿಯಾ ಧರಿಸಿದ್ದ ಲೆಹೆಂಗಾ ತಯಾರಿಸಿದ ಫ್ಯಾಶನ್ ಡಿಸೈನರ್ ಅನಾಮಿಕಾ ಖನ್ನಾ ಲೆಹೆಂಗಾದ ವೈಶಿಷ್ಟ್ಯಗಳನ್ನು ರಿವೀಲ್ ಮಾಡಿದ್ದಾರೆ. ಅವರು ಅಥಿಯಾ ಮದುವೆ ಲೆಹೆಂಗಾ ತಯಾರಿಸಲೆಂದೇ ಬರೋಬ್ಬರಿ 10 ಸಾವಿರ ಗಂಟೆಯನ್ನು ವ್ಯಯಿಸಿದ್ದಾರಂತೆ!
ಲೈಟ್ ಪಿಂಕ್ ಬಣ್ಣದ ಲೆಹಂಗಾ ಧರಿಸಿದ್ದ ಅಥಿಯಾ ಅದಕ್ಕೆ ಮ್ಯಾಚಿಂಗ್ ಗ್ರ್ಯಾಂಗ್ ಚೋಕರ್ ನೆಕ್ಲೇಸ್, ಮಾಂಗ್ ಟಿಕಾ, ಕಿವಿಯೋಲೆ ಮತ್ತು ಬಳೆ ಧರಿಸಿದ್ದರು. ರಿಚ್ ಲುಕ್ನಲ್ಲಿ ಮದುಮಗಳು ಅಥಿಯಾ ಗಮನ ಸೆಳೆದಿದ್ದರು. ಈ ಲೆಹೆಂಗಾವನ್ನು ತಯಾರಿಸಲು ಡಿಸೈನರ್ 10 ಸಾವಿರ ಗಂಟೆ ವ್ಯಯಿಸಿರುವುದರ ಹಿಂದೆಯೂ ಸಖತ್ ಸ್ಟೋರಿ ಇದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇದು ಹ್ಯಾಂಡ್ಮೇಡ್ ಲೆಹೆಂಗಾ. ಅಥಿಯಾ ಸೂಕ್ಷ್ಮ ಅಭಿರುಚಿ ಹೊಂದಿದವರು. ಹೀಗಾಗಿ ಅಷ್ಟೇ ಸೂಕ್ಷ್ಮವಾಗಿ ಲೆಹೆಂಗಾ ತಯಾರಿಕೆ ಮಾಡಲಾಗಿದೆ. ಜದೋರ್ಜಿ ಮಚ್ಚು ಜಾಲಿ ವರ್ಕ್ನ್ನು ರೇಷ್ಮೆಯಿಂದ ಮಾಡಲಾಗಿದೆ. ಸಿಲ್ಕ್ ಆರ್ಗನ್ಝಾದಿಂದ ದುಪಟ್ಟಾ ತಯಾರಿಸಲಾಗಿದೆ ಎಂದು ಹೇಳಿದ್ದಾರೆ.