ಹೈದರಾಬಾದ್, ಜ 21 (DaijiworldNews/DB): ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಹೆಸರು ಆಗಾಗ ಒಟ್ಟಿಗೆ ಕೇಳಿ ಬರುತ್ತಲೇ ಇರುತ್ತದೆ. ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸು ಗುಸು ಸಾಮಾನ್ಯವಾಗಿ ಹರಿದಾಡುತ್ತಿರುತ್ತದೆ. ಇದೀಗ ತಮ್ಮಿಬ್ಬರ ಬಗ್ಗೆ ಕೇಳಿ ಬರುತ್ತಿರುವ ಎಲ್ಲಾ ಅಂತೆಕಂತೆಗಳಿಗೆ ರಶ್ಮಿಕಾ ಉತ್ತರಿಸಿದ್ದಾರೆ.
ಹೌದು. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ರಶ್ಮಿಕಾ-ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ ಕೇಳಲಾಯಿತು. ಇದಕ್ಕೆ ನಟಿ ಸಖತ್ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ಗಾಳಿಸುದ್ದಿಗಳನ್ನು ಹರಿಯಬಿಡುತ್ತಿರುವವರಿಗೆ ಸರಿಯಾಗಿಯೇ ಚಾಟಿ ಬೀಸಿದ್ದಾರೆ. ನಾನೂ, ದೇವರಕೊಂಡ ಬೆಸ್ಟ್ ಫ್ರೆಂಡ್ಸ್. ನನಗೆ ನನ್ನದೇ ಆದ ಫ್ರೆಂಡ್ಸ್ ಸರ್ಕಲ್ ಇದೆ. ಅವರೊಂದಿಗೇ ಹೆಚ್ಚು ಸಮಯ ಕಳೆಯುತ್ತೇನೆ. ಫ್ರೆಂಡ್ಸ್ ಸರ್ಕಲ್ ಜೊತೆ ಸೇರಿ ಟ್ರಿಪ್ ಹೋದರೆ ನಾನೂ, ವಿಜಯ್ ಇಬ್ಬರೇ ಹೋದ್ವಿ ಅಂತ ಸುದ್ದಿ ಹಬ್ಬಿಸಲಾಗುತ್ತೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ ರಶ್ಮಿಕಾ.
ಸಿನಿಮಾ ರಿಲೀಸ್ ಸಮಯದಲ್ಲಿಯೂ ಇದನ್ನೇ ಮಾತನಾಡುತ್ತಾರೆ. ಸಿನಿಮಾ ಬಗ್ಗೆ ಮಾತನಾಡಲಿ. ಅದಕ್ಕಾಗಿ ವರ್ಷಾನುಗಟ್ಟಲೆ ಕಷ್ಟ ಪಡುತ್ತೇವೆ. ಎಲ್ಲಿವರೆಗೆ ನಮ್ಮ ಪೋಷಕರಿಗೆ ಸಮಸ್ಯೆ ಇಲ್ಲವೋ ಅಲ್ಲಿವರೆಗೆ ಸಹಿಸಬಹುದು. ಆದರೆ ಎಲ್ಲದಕ್ಕೂ ಒಂದು ಮಿತಿ ಎಂಬುದಿರುತ್ತದೆ ಎಂದು ನಟಿ ಗಾಳಿ ಸುದ್ದಿ ಹರಡಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.