ಮುಂಬೈ, ಜ 16 (DaijiworldNews/HR): ನಟಿ ರಾಖಿ ಸಾವಂತ್ ಅವರನ್ನು ನಾನು ಮದುವೆ ಆಗಿದ್ದು ನಿಜ ಎಂದು ಆದಿಲ್ ಆದಿಲ್ ಖಾನ್ ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಆದಿಲ್ ಖಾನ್ ಜೊತೆ ರಾಖಿ ಸಾವಂತ್ ಅವರು ಸೀಕ್ರೆಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆ ವಿಚಾರ ಇತ್ತೀಚೆಗೆ ಬಯಲಾಗಿತ್ತು. ಆದರೆ ಮದುವೆ ಆಗಿದ್ದನ್ನು ಒಪ್ಪಿಕೊಳ್ಳಲು ಆದಿಲ್ ಖಾನ್ ಹಿಂದೇಟು ಹಾಕಿದ್ದರು. ಆದರೆ ಇದೀಗ ರಾಖಿ ಸಾವಂತ್ ಅವರನ್ನು ನಾನು ಮದುವೆ ಆಗಿದ್ದು ನಿಜ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನು ರಾಖಿಯನ್ನು ಮದುವೆ ಆಗಿಲ್ಲ ಅಂತ ನಾನು ಎಂದಿಗೂ ಹೇಳಿಲ್ಲ. ಕೆಲವು ವಿಷಯಗಳನ್ನು ನಿಭಾಯಿಸಬೇಕಿತ್ತು. ಹಾಗಾಗಿ ಮೌನವಾಗಿದ್ದೆ. ಮದುವೆಯ ಶುಭಾಶಯಗಳು ರಾಖಿ’ ಎಂದು ಆದಿಲ್ ಖಾನ್ ಪೋಸ್ಟ್ ಮಾಡಿದ್ದಾರೆ.