ಬೆಂಗಳೂರು, ಜ 15 (DaijiworldNews/DB): ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ಸದಾ ಸುದ್ದಿಯಲ್ಲಿರುವ ನಟಿ. ಸಿನಿಮಾ ವಿಚಾರವಾಗಿಯೂ, ಟ್ರೋಲ್ ವಿಷಯದಲ್ಲಿಯೂ ರಶ್ಮಿಕಾ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಇದೀಗ ರಶ್ಮಿಕಾ ಟ್ಯಾಟೂ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.
ಹೌದು. ರಶ್ಮಿಕಾ ತಮ್ಮ ಕೈಯಲ್ಲಿ ʻIrreplacebleʼ ಎಂಬುದಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೇ ಪದವನ್ನು ಯಾಕೆ ರಶ್ಮಿಕಾ ಟ್ಯಾಟೂವಾಗಿ ಹಾಕಿಸಿಕೊಂಡರು ಎಂಬ ಕುತೂಹಲ ಅಭಿಮಾನಿಗಳದ್ದು. ಇದೀಗ ಆ ಪದದ ಹಿಂದಿರುವ ಸೀಕ್ರೆಟ್ನ್ನು ರಶ್ಮಿಕಾ ರಿವೀಲ್ ಮಾಡಿದ್ದಾರೆ.
ʻIrreplacebleʼ ಎಂದರೆ ತುಂಬಲಾಗದ ಎಂದರ್ಥ. ನಾನು ಯಾವಾಗಲು ನಾನಾಗಿಯೇ ಇರಲು ಇಷ್ಟಪಡುತ್ತೇನೆ. ಪ್ರತಿ ಮನುಷ್ಯನಿಗೆ ಅವನದೇ ಆದ ಸ್ಥಾನವಿದೆ, ಮತ್ತು ಅದನ್ನು ಯಾರೂ ತುಂಬಲಾರರು. ನೀವು ನೀವೇ ಹೊರತು, ಇನ್ನೊಬ್ಬ ನೀವಾಗಲು ಸಾಧ್ಯವಿಲ್ಲ. ಅದಕ್ಕಾಗಿಯೇ ಈ ಪದವನ್ನು ನಾನು ಟ್ಯಾಟೂ ಹಾಕಿಸಿಕೊಂಡೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ರಶ್ಮಿಕಾಗೆ ಟ್ಯಾಟೂ ಹಾಕಿಸಿಕೊಳ್ಳುವ ಐಡಿಯಾವೇ ಇರಲಿಲ್ಲವಂತೆ. ಕಾಲೇಜಿನಲ್ಲಿದ್ದಾಗ ಹುಡುಗಿಯರು ಜಾಸ್ತಿ ನೋವು ಅನುಭವಿಸುವುದಿಲ್ಲ, ಅವರು ಸೂಜಿಗೂ ಹೆದರುತ್ತಾರೆ ಎಂದು ಸ್ನೇಹಿತನೊಬ್ಬ ಹೇಳಿಕೊಂಡಿದ್ದನ್ನೇ ಸೀರಿಯಸ್ ಆಗಿ ತೆಗೆದುಕೊಂಡ ರಶ್ಮಿಕಾ ಆತನ ಮಾತಿಗೆ ರೆಬೆಲ್ ಆಗಿ ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರಂತೆ.