ಮುಂಬೈ, ಜ 14 (DaijiworldNews/DB): ಟಾಲಿವುಡ್ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಮತ್ತು ಕಿರುತೆರೆ ನಟಿ ಮಹಾಲಕ್ಷ್ಮಿ ಜೋಡಿ ಮತ್ತೆ ಟ್ರೋಲ್ ಆಗಿದ್ದಾರೆ. ಕಾರಣ ಅವರು ಶೇರ್ ಮಾಡಿರುವ ರೊಮ್ಯಾಂಟಿಕ್ ಫೋಟೊಗಳು.
ಕಳೆದ ವರ್ಷ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಲೂ ನೆಟ್ಟಿಗರು ಜೋಡಿಯನ್ನು ಟ್ರೋಲ್ ಮಾಡಿದ್ದರು. ಆ ಬಳಿಕವೂ ಒಂದಿಲ್ಲೊಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ದಂಪತಿ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದು, ಇದಕ್ಕೂ ಟ್ರೋಲ್ ಆಗಿದ್ದಾರೆ. ದುಡ್ಡಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂಬುದಾಗಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ, ಹಣದ ಶಕ್ತಿಯೇ ಅಂತಹುದು ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ.
ಕಿರುತೆರೆ ನಟ ಈಶ್ವರ್ ರಘುನಾಥ್ ಜೊತೆ ಮಹಾಲಕ್ಷ್ಮಿಗೆ ಅಫೇರ್ ಇದೆ ಎಂಬುದಾಗಿ ಕೆಲ ದಿನಗಳ ಹಿಂದೆ ಸುದ್ದಿ ಹರಿದಾಡಿತ್ತು. ಇದಕ್ಕೆ ಈಶ್ವರ್ ಪತ್ನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ರವೀಂದ್ರ ಚಂದ್ರಶೇಖರ್ ಅವರಾಗಲೀ, ಮಹಾಲಕ್ಷ್ಮಿ ಅವರಾಗಲೀ ಈ ಸುದ್ದಿಗಳಿಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ.