ಮುಂಬೈ, ಜ 12 (DaijiworldNews/DB): ಪ್ರಾಯೋಗಿಕ ಚಿತ್ರ ವಿಚಿತ್ರ ಉಡುಗೆಗಳ ಮೂಲಕ ಸದಾ ಟ್ರೋಲ್ಗೊಳಗಾಗುವ ಉರ್ಫಿ ಜಾವೇದ್ ದಿನಕ್ಕೊಂದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಇನ್ನೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂಬೈನಲ್ಲಿ ಗುರುವಾರ ಕಾಣಿಸಿಕೊಂಡಿರುವ ನಟಿ ಕಂ ಮಾಡೆಲ್ ಉರ್ಫಿ ಜಾವೇದ್, ತಮ್ಮ ಕಪ್ಪು ಬಣ್ಣದ ಮಾದಕ ಉಡುಗೆಯಲ್ಲಿ ಅಭಿಮಾನಿಗಳ ಕಣ್ಸೆಳೆದರು. ಕಪ್ಪು ಬಣ್ಣದ ಟ್ಯೂಬ್ ಬ್ರೇಲೆಟ್ ಟಾಪ್ ಮತ್ತು ಮ್ಯಾಕ್ಸಿ ಸ್ಕರ್ಟ್ನೊಂದಿಗೆ ಕಪ್ಪು ಸೀ-ಥ್ರೂ ಕೋ-ಆರ್ಡ್ ಸೆಟ್ ಧರಿಸಿ ಬಂದ ಉರ್ಫಿ ತಮ್ಮ ಧಿರಿಸಿನಲ್ಲಿ ಎಂದಿಗಿಂತ ಹೆಚ್ಚು ಗ್ಲಾಮರಸ್ ಲುಕ್ ಪಡೆದುಕೊಂಡರು. ಕೂದಲನ್ನು ಪೋನಿಟೇಲ್ನಲ್ಲಿ ವಿನ್ಯಾಸಗೊಳಿಸಿದ್ದು ಹೆಚ್ಚು ಆಕರ್ಷಕವಾಗಿ ಕಂಡರು.
ತಮ್ಮ ವಿಚಿತ್ರ ಕಾಸ್ಟ್ಯೂಮ್ಗಳಿಂದಾಗಿ ಉರ್ಫಿ ಜಾವೇದ್ ಆಗಾಗ ಟ್ರೋಲ್ಗೊಳಗಾಗುವುದಲ್ಲದೆ, ಅವರ ಮೇಲೆ ದೂಷಣೆಗಳೂ ಕೇಳಿ ಬರುತ್ತಿವೆ. ಆದರೆ ಎಷ್ಟೇ ಆಕ್ರೋಶಗಳು ವ್ಯಕ್ತವಾದರೂ, ಧಿರಿಸಿನ ಪ್ರಯೋಗಗಳನ್ನು ಮಾಡುವುದಲ್ಲಿ ಉರ್ಫಿ ಪ್ರತಿದಿನ ಮುಂದುವರಿಯುತ್ತಲೇ ಇದ್ದಾರೆ.