ಮುಂಬೈ, ಜ 09 ( DaijiworldNews/MS): ಕ್ರಿಕೆಟ್ನಿಂದ ಕೆಲವು ದಿನಗಳ ಕಾಲ ಬಿಡುವು ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಪ್ರಸ್ತುತ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ.
ಇದೀಗ ಅವರು ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾಳನ್ನು ಬೀಚ್ ಗೆ ಕರೆದುಕೊಂಡು ಹೋಗಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ
"ದೇವರು ನನಗೆ ನಿನ್ನನ್ನು ಕೊಟ್ಟಿದ್ದಾನೆ. ನಾನು ಬೇರೆ ಏನನ್ನು ಕೇಳಲು ಬಯಸುವುದಿಲ್ಲ. ಧನ್ಯವಾದ ಹೇಳಲು ಬಯಸುತ್ತೇನೆ ಅಷ್ಟೇ " ಎಂದು ಮಗಳನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.