ಮುಂಬೈ, ಜ 07 (DaijiworldNews/DB): ಬಾಲಿವುಡ್ ಸ್ಟಾರ್ಗಳಾದ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರ ಡೇಟಿಂಗ್ ವಿಚಾರವೇ ಬಾಲಿವುಡ್ ಅಂಗಳದಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಇಬ್ಬರ ಲಿಪ್ಲಾಕ್ ವೀಡಿಯೋ ವೈರಲ್ ಆಗಿರುವುದು.
ಗೋವಾದಲ್ಲಿ ಹೊಸ ವರ್ಷಾಚರಣೆಗೆಂದು ಹೋಗಿದ್ದ ತಮನ್ನಾರೊಂದಿಗೆ ವಿಜಯ್ ವರ್ಮಾ ಕೂಡಾ ಹೋಗಿದ್ದರು. ಈ ವೇಳೆ ಇಬ್ಬರೂ ಕಿಸ್ ಮಾಡಿಕೊಳ್ಳುವ ವೀಡಿಯೋವೊಂದನ್ನು ತಮನ್ನಾ ಶೇರ್ ಮಾಡಿದ್ದರು. ಈ ವೀಡಿಯೋ ನೋಡಿದ ಬಾಲಿವುಡ್ ಮಂದಿ, ಅಭಿಮಾನಿಗಳು ಇಬ್ಬರೂ ಡೇಟಿಂಗ್ನಲ್ಲಿದ್ದಾರೆಂದೇ ಮಾತನಾಡುತ್ತಿದ್ದಾರೆ.
ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ಮತ್ತು ಊಟ ಮಾಡುತ್ತಿರುವ ಫೋಟೋಗಳನ್ನು ತಮನ್ನಾ ಹಂಚಿಕೊಂಡಿದ್ದು, ಈ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡುವಾಗ ವಿಜಯ್ ವರ್ಮಾ ಕುರಿತು ಕೇಳಿದ್ದಾರೆ. ಇನ್ನು ಕೆಲವರು ವಿಜಯ್ ವರ್ಮಾ ನಿಮಗೆ ಹೊಂದಿಕೆಯಾಗುವುದಿಲ್ಲ, ಕೆಟ್ಟ ಸೆಲೆಕ್ಷನ್, ಅವರೊಂದಿಗೆ ಲಿಪ್ ಲಾಕ್ ಮಾಡಿದ್ದು ಯಾಕೆ ಎಂಬುದಾಗಿ ತರಹೇವಾರಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.