ಮುಂಬೈ, ಜ 05 ( DaijiworldNews/MS): ನಟಿ ಸಮಂತಾ ರುತ್ ಪ್ರಭು ಅವರು ಮಯೋಸಿಟಿಸ್ ಎಂಬ ಕಾಯಿಲೆಗೆ ತುತ್ತಾಗಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಬಹಳ ಅಪರೂಪ.
ಇದೀಗ ತಮಗಿರುವ ಖಾಯಿಲೆ ಬಗ್ಗೆ ಹೇಳಿಕೊಂಡ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರ ಜೊತೆ ಸೆಲ್ಪಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಸನ್ ಗ್ಲಾಸ್ ಹಾಗೂ ಬಿಳಿ ಬಣ್ಣದ ಸ್ಲಿವ್ ಲೆಸ್ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಅವರು ಮುಷ್ಟಿಯಲ್ಲಿ ಮಣಿ ಸರವನ್ನು ಹಿಡಿಕೊಂಡಿದ್ದು, ಯಾವುದೇ ಭಾವನೆಗಳನ್ನು ಹೊರಹಾಕದೆ ವಿಚಿತ್ರವಾದ ಮನೋಭಾವದಿಂದ ಏರ್ ಪೋರ್ಟ್ ನಿಂದ ಹೊರನಡೆದಿದ್ದಾರೆ.
ಅದರೂ ಸಮಂತಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.