ಮುಂಬೈ, ಡಿ 23 (DaijiworldNews/HR): ನಟ ನಟಿಯರು ಮದುವೆ, ಬರ್ತಡೇ ಪಾರ್ಟಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ದುಡ್ಡು ಪಡೆದು ನೃತ್ಯ ಮಾಡುತ್ತಾರೆ. ಆದರೆ ನಾನು ಯಾವತ್ತೂ ಆ ರೀತಿಯಲ್ಲಿ ಡ್ಯಾನ್ಸ್ ಮಾಡಿಲ್ಲ ಎಂದು ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.
ತಮ್ಮ ನೆಚ್ಚಿನ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ವಿಡಿಯೋವನ್ನು ಶೇರ್ ಮಾಡಿರುವ ಕಂಗನಾ, ಖಾಸಗಿ ಸಮಾರಂಭವೊಂದರಲ್ಲಿ ಲತಾ ಅವರಿಗೆ ಹಾಡಲು ಕೇಳಿಕೊಳ್ಳಲಾಗಿದ್ದು, ಆ ಹಾಡಿಗೆ ದೊಡ್ಡಮೊತ್ತದಲ್ಲೇ ಹಣ ನೀಡುವುದಾಗಿಯೂ ಆಯೋಜಕರು ಹೇಳಿದ್ದರು. ಆದರೆ ಹಾಡಲು ಲತಾ ನಿರಾಕರಿಸಿದರಂತೆ. ದುಡ್ಡಿಗಾಗಿ ನಾನು ಹಾಡಲಾರೆ ಎಂದು ಹೇಳಿದ್ದರಂತೆ.
ಇನ್ನು ಲತಾ ಅವರ ಮಾತುಗಳನ್ನು ಉಲ್ಲೇಖ ಮಾಡಿರುವ ಕಂಗನಾ, ನನಗೆ ಲತಾ ಅವರು ಯಾವತ್ತಿಗೂ ಆದರ್ಶ. ಅವರ ಮಾತನ್ನು ಒಪ್ಪುತ್ತೇನೆ ಮತ್ತು ಪಾಲಿಸಿಕೊಂಡು ಬಂದಿದ್ದೇನೆ ಎಂದಿದ್ದಾರೆ.