ಮುಂಬೈ, ಡಿ 21 (DaijiworldNews/DB): ಸೋಶಿಯಲ್ ಮೀಡಿಯಾದಲ್ಲಿ ಸದಾ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇನ್ಸ್ಟಾಗ್ರಾಂ ಫಾಲೋವರ್ಗಳೆಲ್ಲಾ ನನ್ನ ಸಿನಿಮಾ ನೋಡಿದ್ದರೆ ಆ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಜಾನ್ವಿ ಹೀಗೆ ಹೇಳಿಕೊಂಡಿದ್ಯಾಕೆ ಗೊತ್ತಾ? ಸಂದರ್ಶನವೊಂದರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜಾನ್ವಿ ಸಕ್ರಿಯವಾಗಿರುವ ಹಿಂದಿನ ರಹಸ್ಯದ ಕುರಿತು ಕೇಳಿದ್ದಾರೆ. ಈ ವೇಳೆ ಅಷ್ಟೇ ಸ್ವಾರಸ್ಯಕರವಾಗಿ ಜಾನ್ವಿ ಉತ್ತರಿಸಿದ್ದಾರೆ. ಸೋಶಿಯಲ್ ಮೀಡಿಯಾ ಜನಪ್ರಿಯತೆಗೂ ಸಿನಿಮಾಗೂ ಸಂಬಂಧವಿಲ್ಲ. ಅದರಿಂದ ಪ್ರಯೋಜನ ಆಗುತ್ತಿದ್ದಲ್ಲಿ ನನ್ನ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುತ್ತಿತ್ತು. ಏಕೆಂದರೆ ಇನ್ಸ್ಟಾಗ್ರಾಂನಲ್ಲಿ ನನ್ನನ್ನು ಎರಡು ಕೋಟಿ ಜನ ಫಾಲೋ ಮಾಡುತ್ತಿದ್ದು, ಅವರೆಲ್ಲ ’ಮಿಲಿ’ ನೋಡಿದ್ದರೆ ಸಾಕಾಗಿತ್ತು ಎಂದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುವ ಸಂಖ್ಯೆ ಸ್ಟಾರ್ಡಂಗೆ ಸಂಕೇತ ಅಲ್ಲ ಎನ್ನುವ ಜಾನ್ವಿ, ಸೋಶಿಯಲ್ ಮೀಡಿಯಾ ಇಮೇಜ್ ಪ್ರೇಕ್ಷಕರನ್ನು ತಲುಪಲು ಸಹಾಯಕವಾಗಬಹುದಷ್ಟೇ ಎಂದು ಹೇಳಿಕೊಂಡಿದ್ದಾರೆ.