ಬೆಂಗಳೂರು, ಡಿ 16 (DaijiworldNews/DB): ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಮಿಸೆಸ್ ರಾಮಚಾರಿ ಎಂದೇ ಖ್ಯಾತಿಯಾದವರು. ನಟ ಯಶ್ರನ್ನು ವಿವಾಹವಾದ ಬಳಿಕ ಸಿನಿಮಾ ವೃತ್ತಿ ಜೀವನಕ್ಕೆ ಬ್ರೇಕ್ ಕೊಟ್ಟಿರುವ ರಾಧಿಕಾ ಪಂಡಿತ್ ಇಬ್ಬರು ಮಕ್ಕಳ ಲಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಾಧಿಕಾ ಪಂಡಿತ್ ಅವರು ತಮ್ಮ ಅಪ್ಪನ ಬಗೆಗೆ ಭಾವನಾತ್ಮಕ ಪೋಸ್ಟ್ವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೌದು, ನನ್ನಪ್ಪ ಜಗತ್ತಿನಲ್ಲೇ ಸೇಫ್ ಡ್ರೈವರ್. ಅವರು ಚಾಲನೆ ಮಾಡುವಾಗ ನಾನು ನಿದ್ರಿಸಬಹುದು. ನನ್ನ ಶಾಲಾ, ಕಾಲೇಜು ಜೀವನದಲ್ಲಿ ಅವರೇ ಪಿಕಪ್, ಡ್ರಾಪ್ ಮಾಡಿ ನನ್ನನ್ನು ಸಲಹಿದರು ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ರಾಧಿಕಾ ಹೀಗೆ ಬರೆದುಕೊಳ್ಳಲು ಕಾರಣವಿದೆ. ಅವರ ಇಬ್ಬರು ಮಕ್ಕಳು ಅಜ್ಜನ (ರಾಧಿಕಾ ತಂದೆ) ಸ್ಕೂಟರ್ ಏರಿದ್ದಾರೆ. ಮಕ್ಕಳು ಅಜ್ಜನೊಂದಿಗೆ ಸ್ಕೂಟರ್ನಲ್ಲಿ ಕುಳಿತಿರುವ ಫೋಟೋವನ್ನು ಶೇರ್ ಮಾಡಿರುವ ರಾಧಿಕಾ ತಮ್ಮ ಬಾಲ್ಯದಲ್ಲಿ ಅಪ್ಪನ ಪಾತ್ರವನ್ನು ಮೆಲುಕು ಹಾಕಿದ್ದಾರೆ. ಈ ಫೋಟೋದಲ್ಲಿ ಮಗಳು ಐರಾ ಸ್ಕೂಟರ್ನಲ್ಲಿ ಮುಂದೆ ನಿಂತಿದ್ದರೆ, ಮಗನನ್ನು ರಾಧಿಕಾ ಹಿಡಿದುಕೊಂಡು ಹಿಂದೆ ಕುಳಿತಿದ್ದಾರೆ.
ಇನ್ನು ರಾಧಿಕಾ ಸ್ಯಾಂಡಲ್ವುಡ್ನಲ್ಲಿ ಅಲ್ಪಸಮಯದಲ್ಲೇ ಸ್ಟಾರ್ ನಟಿಯಾಗಿ ಮಿಂಚಿದವರು. ಅವರ ಈ ಸಾಧನೆಯ ಹಿಂದೆ ಹೆತ್ತವರ ಪಾತ್ರ ತುಂಬಾ ದೊಡ್ಡದಾಗಿತ್ತು ಎಂಬುದನ್ನು ಪ್ರತಿ ಬಾರಿಯೂ ರಾಧಿಕಾ ಸ್ಮರಿಸಿಕೊಳ್ಳುತ್ತಾರೆ.