ಬೆಂಗಳೂರು,ಮಾ.04(AZM):ಭಾರತೀಯ ಸೇನೆ ಯಾವ ರೀತಿ ಉಗ್ರರ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ತೋರಿಸುತ್ತಿರುವ ಉರಿ ಸರ್ಜಿಕಲ್ ಸ್ಟ್ರೈಕ್ ಚಿತ್ರ ಜನವರಿ 11ರಂದು ಬಿಡುಗಡೆಗೊಂಡಿದ್ದು, ಒಂದು ಹಂತದ ಯಶಸ್ಸು ಕಂಡು ಸುಮ್ಮನಾಗಿತ್ತು. ಆದರೆ ಪುಲ್ವಾಮ ದಾಳಿಯ ಬಳಿಕ ಉರಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಿಂಚುತ್ತಿದ್ದೆ.
ಪುಲ್ವಾಮ ದಾಳಿಯ ಬಳಿಕ ವೀರ ಯೋಧರ ನೋವನ್ನು ದಿನನಿತ್ಯ ಮಾಧ್ಯಮಗಳಲ್ಲಿ ಕಾಣುತ್ತಿರುವ ಜನರು, ವೀರ ಯೋಧರ ಸಾಹಸವನ್ನು ಉರಿ ಚಿತ್ರದ ಮೂಲಕ ನೋಡಲು ಮತ್ತೇ ಆಸಕ್ತಿ ತೋರಿದ್ದಾರೆ.
ಭಾರತೀಯ ಸೇನೆ ಯಾವ ರೀತಿ ಉಗ್ರರ ವಿರುದ್ಧ, ದೇಶದ್ರೋಹಿಗಳು ವಿರುದ್ಧ ಹೇಗೆ ಯುದ್ಧ ಮಾಡ್ತಾರೆ ಎಂಬುದನ್ನ ಉರಿ ಘಟನೆಯ ಹಿನ್ನೆಲೆ ಅದ್ಭುತವಾಗಿ ತೆರೆಮೇಲೆ ತಂದಿದೆ..
100 ಕೋಟಿ ಕಲೆಕ್ಷನ್ ಮಾಡಿ ಸುಮ್ಮನಾಗಿದ್ದ ಚಿತ್ರ ಇದೀಗ ಮತ್ತೇ ಚುರುಕುಗೊಂಡಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ. 240 ಕೋಟಿ ದಾಟಿ ಯಶಸ್ವಿ 50 ದಿನಗಳನ್ನ ಪೂರೈಸಿದ ಉರಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಭೇಟೆ ಮುಂದುವರಿಸಿದೆ.
ಸದ್ಯ 7ನೇ ವಾರ ಸಕ್ಸಸ್ ಫುಲ್ ಆಗಿ ಪ್ರರ್ದಶನ ಕಾಣ್ತಿರುವ ಈ ಚಿತ್ರ 240 ಕೋಟಿಗೂ ಅಧಿಕ ಗಳಿಕೆ ಕಂಡಿದೆ.