ಮುಂಬೈ, ಡಿ 08 (DaijiworldNews/DB): ತಾವು ಧರಿಸಿದ ಬಟ್ಟೆಯಿಂದಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸಖತ್ ಟ್ರೋಲ್ಗೆ ಒಳಗಾಗಿದ್ದಾರೆ. ಇದು ಉರ್ಫಿ ಜಾವೇದ್ ಪ್ರಭಾವ ಎಂದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಬಾಲಿವುಡ್ನ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಹುಟ್ಟುಹಬ್ಬ ಪಾರ್ಟಿಯಲ್ಲಿ ನಟಿ ಶಿಲ್ಪಾ ಶೆಟ್ಟಿ ಭಾಗವಹಿಸಿದ್ದರು. ಈ ಪಾರ್ಟಿಗೆ ಬಿ-ಟೌನ್ ಮಂದಿ ವೈವಿಧ್ಯ ಧಿರಿಸುಗಳನ್ನು ಧರಿಸಿ ಆಗಮಿಸಿದ್ದರು. ಇನ್ನು ನಟಿ ಶಿಲ್ಪಾ ಶೆಟ್ಟಿ ಅವರ ಡ್ರೆಸ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಉರ್ಫಿ ಜಾವೇದ್ ಪ್ರಭಾವದಿಂದಾಗಿ ಶಿಲ್ಪಾ ಶೆಟ್ಟಿ ಈ ರೀತಿಯ ಬಟ್ಟೆ ಧರಿಸಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಶಿಲ್ಪಾರೊಂದಿಗೆ ಸಹೋದರಿ ಶಮಿತಾ ಶೆಟ್ಟಿ ಕೂಡಾ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಎರಡು ಬದಿಯಲ್ಲಿ ವೈವಿಧ್ಯ ವಿನ್ಯಾಸವಿರುವ ಜೀನ್ಸ್ ಮತ್ತು ಬಾಡಿಸೂಟ್ ಟಾಪ್ ಧರಿಸಿದ್ದ ಶಿಲ್ಪಾ ಶೆಟ್ಟಿಯವರ ಡ್ರೆಸ್ ಒಮ್ಮೆಲೆ ನೋಡುವಾಗ ಬಿಕಿನಿ ಬಾಟಮ್ ವಿನ್ಯಾಸದಂತೆ ಕಂಡು ಬರುತ್ತಿದೆ. ಇದೇ ಟ್ರೋಲ್ಗೆ ಕಾರಣವಾದ ಅಂಶವಾಗಿದೆ. ಇನ್ನು ಶಮಿತಾ ಶೆಟ್ಟಿ ಕಪ್ಪು ಬಣ್ಣದ ಟಾಪ್ ಮತ್ತು ಲೆದರ್ ಸ್ಕರ್ಟ್ ಧರಿಸಿದ್ದರು.