ಮುಂಬೈ,ಫೆ 26(MSP): ಬಾಲಿವುಡ್ ದಂತಕಥೆ, ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಒಂದು ವರ್ಷ ಕಳೆದಿದೆ. ಮೊದಲ ಪುಣ್ಯತಿಥಿಯ ಅಂಗವಾಗಿ ಅವರ ಪತಿ ಬೋನಿ ಕಪೂರ್ ಶ್ರೀದೇವಿಯವರು ಉಡುತ್ತಿದ್ದ ನೇರಳೆ ಕೋಟಾ ಸೀರೆಗಳನ್ನು ಹರಾಜಿಗಿಟ್ಟಿದ್ದಾರೆ. ಶ್ರೀದೇವಿ ಅವರ ಮೆಚ್ಚಿನ ಹ್ಯಾಂಡ್ಲೂಮ್ ಸೀರೆಯನ್ನು ಆನ್ಲೈನ್ನಲ್ಲಿ ಹರಾಜು ಹಾಕಲಾಗಿದ್ದು, ಅದರಿಂದ ಬಂದ ದುಡ್ಡನ್ನು ಸದ್ದುದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ.
ತಮ್ಮ ಅಭೂತಪೂರ್ವ ಅಭಿನಯ, ನೃತ್ಯ ಹಾಗೂ ಸೌಂದರ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಶ್ರೀದೇವಿಯವರಿಗೆ ನೇರಳೆ ಬಣ್ಣದ ಕೋಟಾ ಸೀರೆಗಳೆಂದರೆ ಬಹಳ ಇಷ್ಟ. ಈ ಸೀರೆಯನ್ನು ಹರಾಜಿಗೆ ಇರಿಸಿದ್ದು ಸಂಪಾದನೆಯಾದ ಹಣವನ್ನು ಕನ್ಸರ್ನ್ ಇಂಡಿಯಾ ಫೌಂಡೇಶನ್ ಎನ್ನುವ ಚಾರಿಟೇಬಲ್ ಟ್ರಸ್ಟ್ ಗೆ ನೀಡಲು ಬೋನಿ ಕಪೂರ್ ಮತ್ತು ಮಕ್ಕಳು ನಿರ್ಧರಿಸಿದ್ದಾರೆ. ಈ ಚಾರಿಟೇಬಲ್ ಟ್ರಸ್ಟ್ ಮಹಿಳೆ, ಮಕ್ಕಳು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ.
ಸೀರೆಯ ಆರಂಭಿಕ ಬಿಡ್ 40,000 ರೂ. ಆಗಿತ್ತು. ಬಳಿಕ, ಬಿಡ್ನ ಬೆಲೆ 1,30,000 ರೂ.ಗೆ ತಲುಪಿದೆ.