ಬೆಂಗಳೂರು, ನ 24 (DaijiworldNews/HR): ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಸದ್ಯಕ್ಕೆ ಸಿನಿಮಾದಲ್ಲೆ ಬಿಸಿಯಾಗಿದ್ದು, ಇದೀಗ ಸಮಾರಂಭವೊಂದರಲ್ಲಿ ನಾನು ಮದುವೆಯಾಗಲ್ಲ ಎಂದಿದ್ದು,ಈ ಸುದ್ದಿ ವೈರಲ್ ಆಗಿದೆ.
ರಮ್ಯಾ ಅವರು ಇತ್ತೀಚೆಗೆ ಬೆಂಗಳೂರು ಕಾಲೇಜುವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದು, ಸಮಾರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ನೆಚ್ಚಿನ ನಟಿ ರಮ್ಯಾಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ.
ಇನ್ನು ಮದುವೆ ಏನುಕೇ ಆಗಬೇಕು ಎಂಬುದು ಅರ್ಥವಾಗುತ್ತಿಲ್ಲ. ಅದೇ ನಾವು ಹೇಳುತ್ತಿರೋದು ಮದುವೆ ಆಗಬೇಡಿ ಎಂದು ಸಭೆಯಲ್ಲಿದ್ದ ವಿದ್ಯಾರ್ಥಿ ಹೇಳಿದ್ದಾರೆ. ಮದುವೆ ಆಗಬಾರದು ಅಲ್ವಾ ಯೆಸ್ ಆಗಲ್ಲಾ ಎಂದಿದ್ದಾರೆ.
ಹ್ಯಾಪಿಯಾಗಿರೋದು ಅಥವಾ ಮದುವೆ ಎರಡರಲ್ಲಿ ಒಂದನ್ನ ಚೂಸ್ ಮಾಡಬೇಕು. ಅದಕ್ಕೆ ನಾನು ಹ್ಯಾಪಿಯಾಗಿರೋದನ್ನ ಚ್ಯೂಸ್ ಮಾಡ್ತೀನಿ ಎಂದು ರಮ್ಯಾ ರಿಯಾಕ್ಟ್ ಮಾಡಿದ್ದಾರೆ.