ಬೆಂಗಳೂರು, ನ 23 (DaijiworldNews/MS): ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ, ನಿರೂಪಕಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ, ಇದು ನಮ್ಮ ಮನೆಯವರು ನೋಡಿದ ಹುಡುಗ, ಹುಡುಗನ ಕಡೆಯವರು ಬಂದು ನೋಡಿ, ಮಾತುಕತೆ ಮಾಡಿರೋದು ನಿಜ. ಆದರೆ, ಇದು ಎಂಗೇಜ್ಮೆಂಟ್ ಅಲ್ಲ, ನಾನಿನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.
ಮನೆಯವರು ನಿರ್ಧರಿಸಿರೋದರಿಂದ ಆ ಹುಡುಗ ಕೂಡ ನನಗೆ ಹೊಸ ವ್ಯಕ್ತಿ. ಹೀಗಾಗಿ ನನಗೂ ಆಲೋಚಿಸಲು ಕೊಂಚ ಸಮಯ ಬೇಕಾಗಿದೆ. ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿಸಿದ್ದಾರೆ.
ವೈಷ್ಣವಿ ಗೌಡ ಅವರ ಕುಟುಂಬ ಒಪ್ಪಿರುವ ಹುಡುಗನ ಹೆಸರು ವಿದ್ಯಾಭರಣ ಆಗಿದ್ದು, ಬೆಂಗಳೂರು ಮೂಲದ ಬ್ಯುಸಿನೆಸ್ಮ್ಯಾನ್ ಆಗಿದ್ದಾರೆ. ವಿದ್ಯಾಭರಣ ಅವರು, 2018ರಲ್ಲಿ `ವಿರಾಜ್’ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆಂದು ತಿಳಿದುಬಂದಿದೆ.