ಮುಂಬೈ, ನ 16 (DaijiworldNews/DB): ಅನಾರೋಗ್ಯದಿಂದ ಬಳಲುತ್ತಿರುವ ನಟಿ ಸಮಂತಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸುಧಾರಣೆ ಕಾಣುತ್ತಿದೆ. ಇನ್ನು ಅನಾರೋಗ್ಯದ ನಡುವೆಯೇ ಸಮಂತಾ ಅಭಿಮಾನಿಗಳೊಂದಿಗೆ ಗುಡ್ನ್ಯೂಸ್ವೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಹುಷಾರಾದ ಮೇಲೆ ಮಾಜಿ ಪತಿ ಮನೆಗೇ ಹೋಗ್ತಾರಂತೆ ಈ ನಟಿ.
ಹೌದು. ಹುಷಾರಾದ ಮೇಲೆ ಮಾಜಿ ಪತಿ ನಾಗಚೈತನ್ಯ ಮನೆಗೆ ಹೋಗಬೇಕೆಂಬ ಇಚ್ಚೆ ಸಮಂತಾರದ್ದು. ಸಮಂತಾ ಅನಾರೋಗ್ಯಕ್ಕೆ ಒಳಗಾದಾಗಿನಿಂದಲೇ ನಾಗಚೈತನ್ಯ ಕುಟುಂಬ ಆಕೆಗೆ ಬೆಂಬಲ ನೀಡುತ್ತಿದೆ. ಹೀಗಾಗಿ ಇಬ್ಬರೂ ಡಿವೋರ್ಸ್ ರದ್ದುಪಡಿಸಿ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಸುದ್ದಿಯ ನಡುವೆಯೇ ಸಮಂತಾ ಮಾಜಿ ಪತಿ ಮನೆಗೆ ಹೋಗಬೇಕೆಂದು ಇಚ್ಚೆ ವ್ಯಕ್ತಪಡಿಸಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅವರಿಬ್ಬರು ಮತ್ತೆ ಒಂದಾಗಲಿ ಎಂದೇ ಅಭಿಮಾನಿಗಳೂ ಹಾರೈಸುತ್ತಿದ್ದಾರೆ.
ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ, ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ನಾಲ್ಕೇ ವರ್ಷಗಳಲ್ಲಿ ಡೈವೋರ್ಸ್ ಪಡೆದುಕೊಂಡು ಬೇರೆ ಬೇರೆಯಾಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.