ಮಂಗಳೂರು,ಫೆ 22(MSP): ತುಳು ಚಿತ್ರರಂಗದ ಜತೆಗೆ ಚಂದನವನದಲ್ಲೂ ಮೋಡಿ ಮಾಡಿದ್ದ ನಟ ರೂಪೇಶ್ ನಿರ್ದೇಶಕನಾಗಿ ಭಡ್ತಿ ಪಡೆದಿರೋದು ಹಳೆಯ ವಿಚಾರ. ಹೌದು ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಕದ್ರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಗಿರಿಗಿಟ್' ಸಿನೆಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ.
ಹಾಸ್ಯಮಯ ಚಿತ್ರ ಗಿರಿ ಗಿಟ್ ನಲ್ಲಿ ಲವ್ ಸ್ಟ್ರೋರಿಯೂ ಅಡಗಿದ್ದು, ಚಿತ್ರದಲ್ಲಿ ನಾಯಕನತನಾಗಿ ರೂಪೇಶ್ ಮತ್ತು ನಾಯಕಿಯಾಗಿ ಪುತ್ತೂರಿನ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಮಂಜುನಾಥ್ ಅತ್ತಾವರ ನಿರ್ಮಿಸುತ್ತಿದ್ದಾರೆ. ಗಿರಿಗಿಟ್ ಚಿತ್ರದಲ್ಲಿ ಖಡಕ್ ಮಿಲಿಟ್ರಿ ಆಫೀಸರ್ ಆಗಿ ಕುಸಲ್ದರಸೆ ಖ್ಯಾತಿಯ ನವೀನ್ ಡಿ ಪಡೀಲ್ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ ಅರವಿಂದ ಬೋಳಾರ,ಬೋಜರಜ್ ವಾಮಂಜೂರು, ಪ್ರಸನ್ನ ಶೆಟ್ಟಿ, ಸಂದೀಪ್ ಶೆಟ್ಟಿ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದಾರೆ.
ಕಾಮಿಡಿ ಹಾಗೂ ಯುವ ಸಮುದಾಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಗಿರಿಗಿಟ್ ತಯಾರಿಸಲಾಗಿದ್ದು, ಸದ್ಯ ಸಿನಿಮಾತಂಡವೂ ಸಂಕಲನದ ಕೆಲಸದಲ್ಲಿ ತೊಡಗಿಸಿಕೊಂಡಿದೆ.