ಮುಂಬೈ, ನ 13 (DaijiworldNews/DB): ಬಾಲಿವುಡ್ ಬೆಡಗಿ ಕೃತಿ ಸನೋನ್ ಸದ್ಯ ಭೇಡಿಯಾ ಸಿನಿಮಾದ ಪ್ರಮೋಶನ್ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಶನ್ ಹೋಗುವಾಗೆಲ್ಲಾ ಅವರು ಸೀರೆಯನ್ನೇ ಧರಿಸಿದ್ದಾರೆ. ಆದರೂ ಕೃತಿ ಟ್ರೋಲ್ಗೆ ಗುರಿಯಾಗಿದ್ದಾರೆ. ಸೀರೆಯೊಂದಿಗೆ ಬಿಕಿನಿ ಬ್ಲೌಸ್ ಧರಿಸಿರುವುದೇ ಟ್ರೋಲ್ ಆಗಲು ಕಾರಣ.
ಪ್ರಮೋಶನ್ನಲ್ಲಿ ತೊಡಗಿರುವ ಕೃತಿ ಎಲ್ಲಾ ಕಡೆಗಳಿಗೂ ಸೀರೆ ಉಟ್ಟುಕೊಂಡೇ ಹೋಗಿದ್ದಾರೆ. ಆದರೆ ಸೀರೆಗೆ ಅವರ ಬಿಕಿನಿ ಬ್ಲೌಸ್ ಧರಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಬಾಲಿವುಡ್ ಸೀರೆ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ಹೊರ ಹಾಕಿದ್ದಾರೆ. ಹೀಗಾಗಿ ಭಾರತೀಯ ಸಂಸ್ಕೃತಿ ಪ್ರಕಾರ ಸೀರೆ ಉಟ್ಟರೂ ಬಿಕಿನಿ ಬ್ಲೌಸ್ನಿಂದಾಗಿ ಕೃತಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ಕೆಲವರು ಉರ್ಫಿ ಜಾವೇದ್ ಅವರ ದೊಡ್ಡಕ್ಕ ಎಂಬುದಾಗಿ ಕೃತಿ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಲೈಕ್ ಮಾಡಿದ್ದು, ಹಾರ್ಟ್ ಇಮೋಜಿಗಳನ್ನೂ ಒತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೃತಿ ಭೇಡಿಯಾ ಚಿತ್ರ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕೃತಿ ವರುಣ್ ಧವನ್ ಅವರೊಂದಿಗೆ ನಟಿಸಿದ್ದಾರೆ.