ಲಾಸ್ ಏಂಜಲೀಸ್, ನ 11 (DaijiworldNews/DB): ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದ ಪ್ರೀತಿ ಜಿಂಟಾ ಇಂದು ಆ ಮಕ್ಕಳ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಮುದ್ದು ಮಕ್ಕಳಿಗೆ ಶುಭ ಕೋರಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಮುದ್ದು ಮಕ್ಕಳಾದ ಗಿಯಾ ಹಾಗೂ ಜೈಯ ಫೋಟೋ ಹಂಚಿಕೊಂಡಿರುವ ಪ್ರೀತಿ, ನಿಮಗಾಗಿ ನಾನು ಪ್ರಾರ್ಥಿಸಿದ್ದೆ. ನಿಮಗಿಂದು ಒಂದು ವರ್ಷದ ಸಂಭ್ರಮ. ಈ ಕ್ಷಣದಲ್ಲಿ ಹೃದಯ ತುಂಬಿ ಬಂದಿದೆ. ನಿಮ್ಮ ನಗು, ಬೆಚ್ಚಗಿನ ಅಪ್ಪುಗೆ ಸದಾ ನನ್ನೊಂದಿಗಿರಲಿ. ಪುಟ್ಟ ಗಿಯಾಗೆ ಜನ್ಮ ದಿನದ ಶುಭಾಶಯ ಎಂದು ಗಿಯಾಗೆ ಶುಭ ಕೋರಿದ್ದಾರೆ.
ಇನ್ನು ಜೈಗೆ ಪ್ರತ್ಯೇಕವಾಗಿ ಶುಭಾಶಯ ತಿಳಿಸಿರುವ ಪ್ರೀತಿ, ನಾವು ಒಬ್ಬರಿಗೊಬ್ಬರು ತಿಳಿದಿದ್ದೇವೆ, ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ ನನ್ನ ಮೇರಿ ಜಾನ್. ನಿನಗೆ ಹುಟ್ಟುಹಬ್ಬ ಶುಭ ತರಲಿ. ಜೀವನದಲ್ಲಿ ಸದಾ ಖುಷಿಯಾಗಿರು ಎಂದು ಬರೆದುಕೊಂಡಿದ್ದಾರೆ.
2016 ರಲ್ಲಿ ಜೀನ್ ಗುಡೆನಫ್ ಅವರನ್ನು ವಿವಾಹವಾದ ಬಳಿಕ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿ ನೆಲೆಸಿರುವ ಪ್ರೀತಿ ಜಿಂಟಾ ಕಳೆದ ವರ್ಷವಷ್ಟೇ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡಿದ್ದರು. ‘ದಿಲ್ ಸೇ’, ‘ಲಕ್ಷ್ಯ’, ‘ಸಲಾಮ್ ನಮಸ್ತೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಪ್ರೀತಿ, 2018ರಲ್ಲಿಭಯ್ಯಾಜಿ ಸೂಪರ್ಹಿಟ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಬಳಿಕ ಲಾಸ್ ಏಂಜಲೀಸ್ನಲ್ಲಿಯೇ ಸೆಟಲ್ ಆಗಿದ್ದಾರೆ.