ಮುಂಬೈ, ನ 07 (DaijiworldNews/HR): ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್, ಕಿಸಿ ಕಿ ಜಾನ್' ಚಿತ್ರದ ಶೂಟಿಂಗ್ ವೇಳೆ ನಟಿ ಪೂಜಾ ಹೆಗ್ಡೆ ಅವರ ಕಾಲಿಗೆ ಪೆಟ್ಟಾಗಿದ್ದು, ಈ ಮಾಹಿತಿಯನ್ನು ಪೋಟೊ ಮೂಲಕ ಹಂಚಿಕೊಂಡಿದ್ದಾರೆ.
ಪೂಜಾ ಅವರು ಕಳೆದ ಎರಡು ವಾರಗಳಿಂದ ವಿಶ್ರಾಂತಿ ಪಡೆಯುತ್ತಿದ್ದು, ಈಗ ಅವರ ಆರೋಗ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ಪೂಜಾ ಹೆಗ್ಡೆ ಅವರು ಬಕೆಟ್ ಒಳಗೆ ಕಾಲಿಟ್ಟುಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದು, 'ಪ್ರತಿ ಮುಂಜಾನೆ ಹೀಗೆಯೇ ಇರುತ್ತದೆ. ರಿಕವರಿ ಹಂತದಲ್ಲಿ ಇದ್ದೇನೆ. ನಾನು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.