ಮುಂಬೈ, ನ 03 (DaijiworldNews/MS): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 3 ವರ್ಷಗಳ ನಂತರ ಭಾರತಕ್ಕೆ ಬಂದಿಳಿದಿದ್ದಾರೆ. ಹೀಗಾಗಿ ಸಹಜ ವಾಗಿಯೇ ಕಾತರರಾಗಿದ್ದಾರೆ. ಜಾಗತಿಕವಾಗಿ ಮಿಂಚುತ್ತಿರುವ ತಾರೆ ತಾವೇನಿದ್ದರೂ ಹೃದಯದಲ್ಲಿ ದೇಸಿ ಗರ್ಲ್ ಎಂದು ಸಾಬೀತುಪಡಿಸಿದ್ದಾರೆ.
ಮೆರೈನ್ ಡ್ರೈವ್ಗೆ ಭೇಟಿ ನೀಡಿದಾಗ ಸಂಭ್ರಮಿಸಿರುವ ವಿಡಿಯೋವೊಂದನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿಯ ಎನರ್ಜಿ ಎದ್ದುಕಾಣುತ್ತಿದೆ. ಬ್ಲಫ್ ಮಾಸ್ಟರ್ ಚಿತ್ರದ 'ಸೇ ನಾ ಸೇ ನಾ' ಹಾಡಿಗೆ ನೃತ್ಯ ಮಾಡಿದ್ದು, 'ಹಳೆಯ ಹಂಟ್ನಲ್ಲಿ ಪಿಟ್ ಸ್ಟಾಪ್.... ಕೇವಲ ಒಂದು ನಿಮಿಷ...ಮುಂಬೈ..ನಾನು ನಿನ್ನನ್ನು ಮಿಸ್ ಮಾಡಿಕೊಂಡಿದ್ದೆ' ಎಂದು ಬರೆದುಕೊಂಡಿದ್ದಾರೆ. ಕೆಲಸದ ವಿಷಯವಾಗಿ ಪಿಗ್ಗಿ ಮುಂಬೈಗೆ ಬಂದಿದ್ದಾರೆ.
ನಟನೆಯ ವಿಚಾರಕ್ಕೆ ಬಂದಾಗ ಸ್ಯಾಮ್ ಹ್ಯೂಘನ್ ಜೊತೆಗೆ "ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ" ಮತ್ತು ಅಮೆಜಾನ್ ಸ್ಟುಡಿಯೋ ಸ್ಪೈ ಸರಣಿ "ಸಿಟಾಡೆಲ್" ನಲ್ಲಿ ರಿಚರ್ಡ್ ಮ್ಯಾಡೆನ್ ("ಗೇಮ್ ಆಫ್ ಥ್ರೋನ್ಸ್") ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಅವರ ಮುಂದಿನ ಹಿಂದಿ ಚಿತ್ರ "ಜೀ ಲೇ ಜರಾ", ಇದನ್ನು ನಿರ್ಮಾಪಕ ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಜೊತೆಗೆ ಪ್ರಿಯಾಂಕಾ ನಟಿಸಲಿದ್ದಾರೆ.