ಮುಂಬೈ, ಅ 31 (DaijiworldNews/HR): ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೇರಿಕಾದ ಪಾಪ್ ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ಬಳಿಕ ಅಮೇರಿಕಾದಲ್ಲೇ ಸೆಟಲ್ ಆಗಿದ್ದು, ಇದೀಗ ಮೂರು ವರ್ಷದ ಬಳಿಕ ಅಮೇರಿಕಾದಿಂದ ಮುಂಬೈಗೆ ಹಾರಿದ್ದಾರೆ.
ಈ ಖುಷಿಯ ವಿಚಾರವನ್ನು ಪ್ರಿಯಾಂಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರು ಭಾರತಕ್ಕೆ ಬರುತ್ತಿರುವುದು ಏಕೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನು ಪ್ರಿಯಾಂಕಾ ಅವರು 2018ರಲ್ಲಿ ನಿಕ್ ಅವರನ್ನು ಮದುವೆಯಾಗಿದ್ದು, ಪ್ರಿಯಾಂಕಾ ಹಾಗೂ ನಿಕ್ ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದು, ಈಗ ಮಗು ಸಮೇತ ಮುಂಬೈ ಹಾರಿದ್ದಾರೆ.