ಮುಂಬೈ, ಅ 29 (DaijiworldNews/DB): ಬಾಲಿವುಡ್ ನಟಿ ಊರ್ವಶಿ ರೌಟೇಲ ಬೋಲ್ಡ್ ಮತ್ತು ಸೌಂದರ್ಯವತಿ. ಮಾಡೆಲಿಂಗ್ನಲ್ಲಿ ಸಾಕಷ್ಟು ಹೆಸರು ಮಾಡಿದ ಊರ್ವಶಿ ಆರ್ಪಿ ಎಂಬ ಹೆಸರಿನ ವಿಚಾರವಾಗಿ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ. ಆರ್ಪಿ ಎಂಬ ಹೆಸರಿನ ಫೇಮಸ್ ವ್ಯಕ್ತಿ ತನ್ನ ಹಿಂದೆ ಬಿದ್ದಿದ್ದರೆನ್ನುವ ಮೂಲಕ ಕ್ರಿಕೆಟಿಗ ರಿಷಭ್ ಪಂತ್ರನ್ನು ತನ್ನೊಂದಿಗೆ ತಳುಕು ಹಾಕಿ ಈ ನಟಿ ಟ್ರೋಲ್ ಆಗಿದ್ದರು.
ಆನಂತರ ಆಗಾಗ ರೌಟೇಲಾ ಮತ್ತು ಪಂತ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಜಗಳಗಳು ನಡೆಯುತ್ತಲೇ ಇತ್ತು. ಪರೋಕ್ಷವಾಗಿ ಪರಸ್ಪರ ಇಬ್ಬರು ಕಾಲೆಳೆದುಕೊಂಡು ಅಭಿಮಾನಿಗಳಿಗೆ ಅಸಮಾಧಾನಕ್ಕೆ ಕಾರಣವಾಗುತ್ತಿದ್ದರು. ಇನ್ನು ಆರ್ಪಿ ವಿಚಾರವಾಗಿ ಸಾಕಷ್ಟು ಇವರಿಬ್ಬರು ಸುದ್ದಿಯಾಗಿದ್ದರು. ಇಬ್ಬರೂ ಒಟ್ಟಿಗೇ ಓಡಾಡುತ್ತಿದ್ದಾರೆ ಎಂಬ ವದಂತಿಗಳೂ ಹಬ್ಬಿತ್ತು. ಕೊನೆಗೆ ನನ್ನನ್ನು ಒಮ್ಮೆ ಬಿಟ್ಟುಬಿಡಿ ಅಕ್ಕಾ ಎಂಬುದಾಗಿ ರಿಷಬ್ ಪಂತ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದರು.
ಇದೀಗ ಆರ್ಪಿ ಎಂದರೆ ರಿಷಬ್ ಪಂತ್ ಅಲ್ಲ ಎಂಬುದಾಗಿ ಹೊಸ ಸುದ್ದಿಯೊಂದು ಊರ್ವಶಿ ಕಡೆಯಿಂದ ಬಂದಿದೆ. ರಾಮ್ ಪೋತಿನೇನಿ ಎಂಬ ತಮಿಳಿನ ನಟನೊಂದಿಗೆ ತಾವಿರುವ ಫೋಟೋವನ್ನು ಊರ್ವಶಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಹೆಸರಿನ ಮೊದಲ ಅಕ್ಷರಗಳು ಆರ್ಪಿ ಎಂಬುದಾಗಿಯೇ ಇರುವುದರಿಂದ ಊರ್ವಶಿಯ ಆರ್ಪಿ ರಿಷಬ್ ಪಂತ್ ಅಲ್ಲ, ರಾಮ್ ಪೋತಿನೇನಿ ಎಂಬುದಾಗಿ ಅಭಿಮಾನಿಗಳು ಊಹಿಸಿದ್ದಾರೆ. ಇವರೇನಾ ನಿಮ್ಮ ಆರ್ಪಿ ಎಂಬುದಾಗಿ ನೆಟ್ಟಿಗರು ಊರ್ವಶಿಯನ್ನು ಪ್ರಶ್ನಿಸಿದ್ದಾರೆ. ಆದರೆ ಊರ್ವಶಿಯ ನಿಜವಾದ ಆರ್ಪಿ ಯಾರು ಎಂಬುದನ್ನು ಸ್ವತಃ ನಟಿ ಬಹಿರಂಗಪಡಿಸಿಲ್ಲ.