ನ್ಯೂಯರ್ಕ್, ಅ 26 (DaijiworldNews/MS): ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪಾಪ್ ಸಿಂಗರ್ ನಿಕ್ ಜೋನಸ್ ದಂಪತಿ ಅಮೆರಿಕದಲ್ಲಿ ತಮ್ಮ ಮಗಳು ಮಾಲ್ತಿ ಮೇರಿಯೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಪ್ರಿಯಾಂಕಾ, ನಿಕ್ ಮಗಳೊಂದಿಗೆ ಸಾಂಪ್ರದಾಯಿಕ ಭಾರತೀಯ ಬಟ್ಟೆಗಳನ್ನು ಧರಿಸಿ ಮಿಂಚಿದ್ದಾರೆ.
ನಿಕ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ ಮಗಳ ಮುಖ ರಿವೀಲ್ ಮಾಡಿಲ್ಲ. ಮಗುವಿನ ಮುಖವು ಚಿತ್ರಗಳಲ್ಲಿ ಕಾಣದಂತೆ ಕೆಂಪು ಹೃದಯದ ಎಮೋಜಿಗಳಿಂದ ಮುಚ್ಚಿದ್ದಾರೆ. ಇದು ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ತನ್ನ ಅಭಿಮಾನಿಗಳನ್ನು ಸಂತೋಷಗೊಳಿಸುವ ಮತ್ತು ಸಂತೋ಼ಷ ಹಂಚಿಕೊಳ್ಳುವ ಯಾವುದೇ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ ಮತ್ತು ಆಗಾಗ ಅವರ ಸುಂದರ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಪ್ರಿಯಾಂಕಾ ಅವರ ಪತಿ ಗಾಯಕ ನಿಕ್ ಜಾನ್ಸ್ ತಮ್ಮ ದೀಪಾವಳಿ ಆಚರಣೆಯ ಚಿತ್ರಗಳನ್ನು ತಮ್ಮ ಮಗುವಿನೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ಹಾಗೂ ನಿಕ್ ಒಂದೇ ಬಣ್ಣದ ಬಟ್ಟೆ ಧರಿಸಿದ್ದಾರೆ. ನಟಿ ಹಣೆಗೆ ಬಿಂದಿ ಇಟ್ಟಿದ್ದು ಎಲ್ಲರ ಗಮನ ಸೆಳೆದಿದೆ. ನಿಕ್ ಅವರು ಈ ಫೋಟೋ ಪೋಸ್ಟ್ ಮಾಡಿ, ‘ದೀಪಾವಳಿ ಹಬ್ಬದ ಶುಭಾಶಯ. ಎಲ್ಲರ ಬಾಳಿನಲ್ಲಿ ಸಂತೋಷ ಹಾಗೂ ಬೆಳಕು ಸಿಗಲಿ ಎಂದು ಹಾರೈಸುತ್ತೇನೆ’ ಎಂಬುದಾಗಿ ಬರೆದುಕೊಂಡಿದ್ದಾರೆ.