ಬೆಂಗಳೂರು, ಅ 25 (daijiworldNews/HR): ನಟಿ ಅಮೂಲ್ಯ ಅವರು ತಮ್ಮ ಮುದ್ದಾದ ಮಕ್ಕಳೊಂದಿಗೆ ಮೊದಲ ವರ್ಷದ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಪೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಮೂಲ್ಯ ಅವರು ತಮ್ಮ ಇಬ್ಬರು ಗಂಡು ಮಕ್ಕಳೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇನ್ನು ಈ ಪೋಟೊಗೆ ಅಭಿಮಾನಿಗಳು ಕಮೆಂಟ್ ಗಳ ಸುರಿಮಳೆ ಸುರಿಸಿದ್ದು, ಅಭಿಮಾನಿಗಳಿಗೆ ಅಮೂಲ್ಯ ಅವರು ಹಬ್ಬದ ಶುಭಾಶಯ ತಿಳಿಸಿದ್ದಾರೆ.