ಬೆಂಗಳೂರು, ಅ 24 (DaijiworldNews/DB): ಯಾವಾಗಲೂ ಹಾಟ್ ಫೋಟೋಗಳಲ್ಲಿಯೇ ಕಾಣಿಸಿಕೊಳ್ಳುವ ತುಪ್ಪದ ಬೆಡಗಿ, ನಟಿ ರಾಗಿಣಿ ದ್ವಿವೇದಿ ದೀಪಾವಳಿ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸೀರೆ ಉಟ್ಟು ಅಚ್ಚ ಭಾರತೀಯ ಸಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಂಡಿರುವ ರಾಗಿಣಿ ಚಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಹೌದು. ದೀಪಗಳ ಹಬ್ಬ ದೀಪಾವಳಿಗೆ ರಾಗಿಣಿ ವಿಶೇಷವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಕೆಂಪು ಸೀರೆ, ಹಸಿರು ಬ್ಲೌಸ್ ಕಾಂಬಿನೇಶನ್ನಲ್ಲಿ ಚೆಂದನವನದ ಗೊಂಬೆ ತುಂಬಾ ಸ್ಟೈಲಿಶ್ ಆಗಿಯೂ, ಸಾಂಪ್ರದಾಯಿಕವಾಗಿಯೂ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಶೈಲಿಯಲ್ಲಿ ಕಾಣಿಸಿಕೊಂಡಿರುವ ನಟಿಯ ಹೊಸ ಲುಕ್ ಅಭಿಮಾನಿಗಳಿಗೆ ಖುಷಿ ತಂದಿದ್ದು, ಹಲವರು ಪ್ರಶಂಸಿಸಿ ಕಾಮೆಂಟ್ ಮಾಡಿದ್ದಾರೆ.
ರಾಗಿಣಿಯ ಈ ದೀಪಾವಳಿಯ ವಿಶೇಷ ಫೋಟೋಶೂಟ್ಗಾಗಿ ದಾವಣಗೆರೆಯಿಂದ ಫೋಟೋಗ್ರಾಫರ್ ಮತ್ತು ಮೇಕಪ್ಮ್ಯಾನ್ ಬೆಂಗಳೂರಿಗೆ ಬಂದಿದ್ದಾರೆ. ಬೆಳಗುತ್ತಿರುವ ದೀಪಗಳ ನಡುವೆ ಹಲವು ಪೋಸ್ಗಳಲ್ಲಿ ರಾಗಣಿ ಫೋಟೋ ತೆಗೆಸಿಕೊಂಡಿದ್ದು, ಒಂದಕ್ಕಿಂದ ಇನ್ನೊಂದು ಮುದ್ಮುದ್ದಾಗಿ ಕಾಣಿಸುತ್ತಿವೆ.