ಪಣಜಿ, ಅ 15 (DaijiworldNews/DB): ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ನಟ ವಿಜಯ್ ದೇವರಕೊಂಡ ಜೊತೆ ಮಾಲ್ಡೀವ್ಸ್ಗೆ ಹೋಗಿದ್ದರು ಎಂಬ ಕಾರಣಕ್ಕೆ ಸುದ್ದಿಯಾಗಿದ್ದ ನಟಿ ಈಗ ಬಿಕಿನಿ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಬಿಕಿನಿ ತೊಟ್ಟು ಅಬುದಾಬಿಯ ಮರಳುಗಾಡಿನಲ್ಲಿ ರಶ್ಮಿಕಾ ಮಾಡಿಸಿಕೊಂಡಿರುವ ಫೋಟೋಶೂಟ್ ವೈರಲ್ ಆಗಿದೆ. ಈವರೆಗೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರೂ, ರಶ್ಮಿಕಾ ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದರೀಗ ಕೊಡಗಿನ ಕುವರಿ ಬಿಕಿನಿಗೂ ಸೈ ಎಂದಿದ್ದಾರೆ. ಅಂದಹಾಗೆ ರಶ್ಮಿಕಾ ಅಮಿತಾಬ್ ಬಚ್ಚನ್ ಅವರೊಂದಿಗೆ ಗುಡ್ಬೈ ಸಿನಿಮಾದಲ್ಲಿ ನಟಿಸಿದ್ದು, ಈಗ ಬಾಲಿವುಡ್ನಲ್ಲಿ ಅವಕಾಶಗಳೂ ಹೆಚ್ಚು ಬರುತ್ತಿವೆ.
ಅಷ್ಟಕ್ಕೂ ಅಬುದಾಬಿಯ ಮರಳುಗಾಡಿನಲ್ಲಿರುವ ರೆಸಾರ್ಟ್ನಲ್ಲಿ ರಶ್ಮಿಕಾ ವೆರೈಟಿ ಕಾಸ್ಟ್ಯೂಮ್ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಎಲ್ಲ ಕಾಸ್ಟ್ಯೂಮ್ಗಳಲ್ಲಿಯೂ ವಿಭಿನ್ನ ಪೋಸ್ ನೀಡಿ ಫೋಟೋ ತೆಗೆಸಿಕೊಂಡಿದ್ದು, ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಬ್ಲಾಕ್ ಕಲರ್ ಬಿಕಿನಿಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಟ್ರಾವೆಲ್ ಲೀಶರ್ ಮ್ಯಾಗಝೀನ್ನ 16ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಈ ಫೋಟೊಶೂಟ್ ನಡೆದಿದೆ ಎನ್ನಲಾಗಿದೆ.
ಇನ್ನು ಬಿಕಿನಿಯೊಂದಿಗೆ ಗೋಲ್ಡನ್ ಸೀಕ್ವೆನ್ ಮೊನೊಕಿನಿಯಲ್ಲಿಯೂ ಫೋಟೋ ತೆಗೆಸಿಕೊಂಡಿದ್ದಾರೆ. ಇನ್ನೊಂದೆಡೆ ಮ್ಯಾಗಝಿನ್ ಫೋಟೋಶೂಟ್ಗಾಗಿಯೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮಾಲ್ಡೀವ್ಸ್ಗೆ ಹೋಗಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ ಸದ್ಯಕ್ಕೆ ಇದಕ್ಕೆ ಯಾವುದೇ ಸ್ಪಷ್ಟ ಉತ್ತರ ಇಬ್ಬರಿಂದಲೂ ಸಿಕ್ಕಿಲ್ಲ.