ಬೆಂಗಳೂರು, ಅ 11 (DaijiworldNews/HR): ಪ್ರಕೃತಿಯ ಮಡಿಲಲ್ಲಿ ಕುಳಿತು ಸ್ಕ್ರಿಪ್ಟ್ ಓದುತ್ತಿರುವ ಚಿತ್ರವನ್ನು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಶೇರ್ ಮಾಡಿಕೊಂಡಿದ್ದು, ರಾಜ್.ಬಿ ಶೆಟ್ಟಿಯವರು ಹತ್ತಿರವಿದ್ದಲ್ಲಿ ಬೇಸರಕ್ಕೆ ಜಾಗವಿಲ್ಲ ಎಂದು ಬರೆದುಕೊಂಡಿದ್ದಾರೆ.
ರಾಜ್.ಬಿ. ಶೆಟ್ಟಿ ಅವರೊಂದಿಗೆ ರಮ್ಯಾ ತಮ್ಮದೇ ನಿರ್ಮಾಣ ಸಂಸ್ಥೆಯಿಂದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ ಘೋಷಿಸಿದ್ದು, ಆಯಪಲ್ಬಾಕ್ಸ್ ಮತ್ತು ರಾಜ್ ಅವರ ಲಾಫಿಂಗ್ ಬುದ್ಧ ನಿರ್ಮಾಣ ಸಂಸ್ಥೆಯಡಿಯಲ್ಲಿ ಚಿತ್ರ ಸಿದ್ಧವಾಗುತ್ತಿದೆ.
ಇನ್ನು 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಮೂಲಕ ಮತ್ತೆ ಚಿತ್ರರಂಗಕ್ಕೆ ಪ್ರವೇಶಿಸಿರುವ ರಮ್ಯಾ ರಮಣೀಯ ಜಾಗದಲ್ಲಿ ಕುಳಿತು ಸ್ಕ್ರಿಪ್ಟ್ ಓದುತ್ತಿರುವ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.