ಚೆನ್ನೈ, ಅ 06(DaijiworldNews/MS): ಸೌತ್ ಇಂಡಸ್ಟ್ರಿಯ ಸ್ಟಾರ್ ಜೋಡಿಯಾಗಿದ್ದ ತಮಿಳು ನಟ ಧನುಷ್ ಹಾಗೂ ಐಶ್ವರ್ಯ (ರಜನಿಕಾಂತ್ ಪುತ್ರಿ ) ದಂಪತಿ 18 ವರ್ಷಗಳ ಹಿಂದೆ ತಮ್ಮ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದರು. ಆದರೆ ಇದೀಗ ದಂಪತಿಗಳು ಪ್ರತ್ಯೇಕಗೊಂಡು 9 ತಿಂಗಳ ಬಳಿಕ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ತಮಿಳು ನಟ ಧನುಷ್, 2004ರಲ್ಲಿ ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದರು. ಈ ಜೋಡಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. 9 ತಿಂಗಳ ಹಿಂದೆ ಇಬ್ಬರೂ ಪ್ರತ್ಯೇಕಗೊಂಡಿರುವ ಕುರಿತಾಗಿ ಹೇಳಿಕೊಂಡಿದ್ದರು.
ಇದೀಗ ಧನುಷ್ ಹಾಗೂ ಐಶ್ವರ್ಯ ಡಿವೋರ್ಸ್ ವಾಪಸ್ ಪಡೆದು ಮತ್ತೆ ಒಂದಾಗುವ ಯೋಚನೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಚ್ಚೇದನದ ಬಳಿಕ ಉಭಯ ಕುಟುಂಬಗಳು ಅವರಿಬ್ಬರನ್ನು ಒಂದಾಗಿಸಲು ಯತ್ನಿಸುತ್ತಿರುವ ಬಗ್ಗೆ ವದಂತಿ ಹರಿದಾಡುತ್ತಿತ್ತು. ಇದೀಗ ಕುಟುಂಬದವರ ನಿರಂತರ ಮನವೊಲಿಕೆಯಿಂದ ಇಬ್ಬರೂ ಒಟ್ಟಿಗಿರಲು ನಿರ್ಧರಿಸಿದ್ದಾರೆ. ಶೀಘ್ರದಲ್ಲಿಯೇ ಒಂದಾಗಿ ಜೀವನ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.