ಮುಂಬೈ, ಅ 01 (DaijiworldNews/DB): ವಿಕ್ಕಿ ಕೌಶಲ್-ಕತ್ರಿನಾ ಕೈಫ್ರನ್ನು ಒಂದಾಗಿಸಿದ್ದ ಕರಣ್ ಜೋಹರ್ ಅವರನ್ನು ವಿಕ್ಕಿ-ಕತ್ರಿನಾ ಮದುವೆಗೇ ಕರೆದಿರಲಿಲ್ಲವಂತೆ! ಈ ಬಗ್ಗೆ ಕಾಫಿ ವಿಥ್ ಕರಣ್ ಶೋನಲ್ಲಿ ಸ್ವತಃ ಕರಣ್ ಅವರೇ ಹೇಳಿಕೊಂಡಿದ್ದಾರೆ.
ವಿಕ್ಕಿ-ಕತ್ರಿನಾ ಇಬ್ಬರೂ ಕರಣ್ ಜೊತೆ ಆತ್ಮೀಯರು. ಆದರೆ ಮದುವೆಗೆ ಕರೆಯದಿರುವ ಬಗ್ಗೆ ತುಂಬಾ ನೋವುಂಟಾಗಿತ್ತು. ಒಂಟಿತನವೂ ಕಾಡಿತ್ತು. ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನೂ ಆಹ್ವಾನಿಸಿಲ್ಲ ಎಂಬುದು ಗೊತ್ತಾದ ಬಳಿಕ ಸ್ವಲ್ಪ ಸಮಾಧಾನ ಪಟ್ಟುಕೊಂಡಿದ್ದೆ ಎಂಬುದಾಗಿ ಕಾಫಿ ವಿಥ್ ಕರಣ್ ಶೋನಲ್ಲಿ ಕರಣ್ ಹೇಳಿಕೊಂಡಿದ್ದಾರೆ.
ಅಸಲಿಗೆ ವಿಕ್ಕಿ ಮತ್ತು ಕತ್ರಿನಾರನ್ನು ಒಂದು ಮಾಡಿದ್ದೇ ಕರಣ್. ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದ್ದ ಕತ್ರಿನಾ ಕೈಫ್ಗೆ ಯಾವ ನಟ ಹ್ಯಾಂಡ್ಸಮ್ ಆಗಿ ಕಾಣುತ್ತಾರೆಂದು ಕರಣ್ ಕೇಳಿದ ಪ್ರಶ್ನೆಗೆ ಕತ್ರಿನಾ ವಿಕ್ಕಿ ಕೌಶಲ್ ಎಂದು ಉತ್ತರಿಸಿದ್ದರು. ಆನಂತರ ಅದೇ ಶೋನಲ್ಲಿ ವಿಕ್ಕಿ ಭಾಗವಹಿಸಿದ್ದಾಗ ಕತ್ರಿನಾ ಮಾತುಗಳನ್ನು ಅವರಿಗೆ ಕೇಳಿಸಲಾಗಿತ್ತು. ಇದಕ್ಕೆ ವಿಕ್ಕಿ ಫಿದಾ ಆಗಿದ್ದರು. ಬಳಿಕ ಇಬ್ಬರ ನಡುವೆ ಅನುರಾಗ ಅರಳಿತ್ತು. ಇದೀಗ ವಿಕ್ಕಿ ಮತ್ತು ಕತ್ರಿನಾ ಅದೇ ಶೋಗೆ ಒಟ್ಟಿಗೇ ಬಂದಿದ್ದು, ತಮ್ಮ ಜೀವನದ ಹಲವು ಸಂಗತಿಗಳನ್ನು ಹೇಳಿಕೊಂಡಿದ್ದಾರೆ.