ಮುಂಬೈ, ಸೆ 14 (DaijiworldNews/DB): ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಬಳಿಕ ಜೈಲಿನಿಂದ ಹೊರ ಬಂದ ಬಳಿಕ ಆ ಘಟನೆಯನ್ನು ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಸದ್ಯ ಸಂಪೂರ್ಣವಾಗಿ ಮರೆತು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟೀವ್ ಆಗಿದ್ದಾರೆ.
ಇತ್ತೀಚೆಗೆ ಆರ್ಯನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ವೊಂದು ಗಮನ ಸೆಳೆದಿದೆ. ಅಷ್ಟಕ್ಕೂ ಇಲ್ಲಿ ಪೋಸ್ಟ್ ಜೊತೆಗೆ ತಂದೆ ಶಾರುಖ್ ಹಾಕಿರುವ ಕಾಮೆಂಟ್ ಹೆಚ್ಚು ಗಮನ ಸೆಳೆಯುತ್ತಿದೆ. ಆರ್ಯನ್ ಖಾನ್ ಪೋಸ್ಟ್ಗೆ ಶಾರುಖ್ ಖಾನ್ ಫನ್ನಿಯಾಗಿ ಕಮೆಂಟ್ ಮಾಡಿರುವುದು ನೆಟ್ಟಿಗರಿಗೆ ಇನ್ನಷ್ಟು ಖುಷಿ ನೀಡಿದೆ.
ಆರ್ಯನ್ ಖಾನ್ ಖಾಸಗಿ ಬ್ರ್ಯಾಂಡ್ ಜೊತೆ ಮಾಡಿಕೊಂಡಿರುವ ಒಪ್ಪಂದವೊಂದರ ಪ್ರಮೋಶನ್ಗಾಗಿ ಹೊಸ ಪೋಸ್ಟ್ ಹಾಕಿದ್ದು, ಅದರಲ್ಲಿ ಆರ್ಯನ್ ಖಾನ್ ಹಾಕಿರುವ ಟಿ-ಶರ್ಟ್ನ್ನು ’ಮಗನೇ ಇದು ನನ್ನ ಟಿ-ಶರ್ಟ್’ ಎಂದು ಶಾರುಖ್ ಖಾನ್ ಫನ್ನಿ ಕಮೆಂಟ್ ಮಾಡಿದ್ದಾರೆ. ತುಂಬಾ ಚೆನ್ನಾಗಿ ಕಾಣುತ್ತಿದ್ದೀಯ. ತಂದೆಯಲ್ಲಿ ಸೈಲೆಂಟ್ ಆಗಿರುವ ವಿಚಾರ ಮಗನಲ್ಲಿ ಎದ್ದು ಕಾಣುತ್ತಿದೆ ಎಂದು ಶಾರುಖ್ ತನ್ನ ಮಗನ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಶಾರುಖ್ ಅಭಿಮಾನಿಗಳೂ ಈ ಕಮೆಂಟ್ನ್ನು ಇಷ್ಟಪಟ್ಟಿದ್ದಾರೆ.
ಇನ್ನು ಆರ್ಯನ್ ಖಾನ್ ತಾಯಿ ಗೌರಿ ಖಾನ್ ಕೂಡಾ ಕಮೆಂಟ್ ಮಾಡಿದ್ದು, 'ನನ್ನ ಹುಡುಗ. ಲವ್.. ಲವ್.. ಲವ್..' ಎಂದು ಬರೆದುಕೊಂಡಿದ್ದಾರೆ. ಆರ್ಯನ್ ಸಹೋದರಿ ಸುಹಾನಾ ಖಾನ್ ಅವರು ಕಣ್ಣಿನಲ್ಲಿ ಹಾರ್ಟ್ ಇರುವ ಎಮೋಜಿ ಪೋಸ್ಟ್ ಮಾಡಿ ಸಹೋದರನ ಪೋಸ್ಟ್ಗೆ ಖುಷಿ ಪಟ್ಟಿದ್ದಾರೆ.
ಸದ್ಯ ಆರ್ಯನ್ ಖಾನ್ ಅವರು ಹೊಸ ವೆಬ್ ಸೀರಿಸ್ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.