ಮತ್ತೆ ಸುದ್ದಿಯಲ್ಲಿದ್ದಾರೆ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ - ಕಿಸ್ಸಿಂಗ್ ವಿಡಿಯೋ ವೈರಲ್
Thu, Feb 07 2019 04:29:08 PM
ನವದೆಹಲಿ, ಫೆ 7(MSP): ಪ್ರಿಯಾ ಪ್ರಕಾಶ್ ವಾರಿಯರ್ ಒಂದೇ ದಿನದಲ್ಲಿ ಭಾರತದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಲೆಬ್ರಿಟಿಯಾದ ಮಲೆಯಾಳಂನ ನಟಿ. ಈಕೆಯ ನಟನೆಯ ಮಲೆಯಾಳಂ ಚಲನಚಿತ್ರದ ಹಾಡೊಂದರ ತುಣುಕು 2018 ರ ಪ್ರೇಮಿಗಳ ದಿನದಂದು ಸಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಈಕೆಯ ಮಾದಕ ನೋಟ ಹಾಗೂ ಕಣ್ಸನ್ನೆ ದೇಶಾದ್ಯಂತ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಕೇವಲ ಒಂದೇ ಒಂದು ವಿಡಿಯೋದಿಂದ ಪ್ರಿಯಾ ಬಾಲಿವುಡ್ ನ ಹಿರಿಯ ನಾಯಕಿಯರಿಗೂ ಸಡ್ಡು ಹೊಡೆದಿದ್ದರು. ರಾತ್ರೋ ರಾತ್ರಿ ಈ ಒಂದು ವಿಡೀಯೋ ಆಕೆಯನ್ನು ಸೆಲೆಬ್ರಿಟಿ ಮಟ್ಟಕ್ಕೇರಿಸಿತ್ತು.
ತನ್ನ ಕಣ್ಸನ್ನೆಯ ಬೆಡಗಿಯ ವಿಡೀಯೋದಿಂದ ದಿಢೀರ್ ಎಂದು ಪ್ರಸಿದ್ಧ ಆಗಿದ್ದು, ಇದೀಗ 2019 ರ ಪ್ರೇಮಿಗಳ ದಿನಾಚರಣೆಯ ವೇಳೆಗೆ ಪ್ರಿಯಾ ವಾರಿಯರ್ ಮತ್ತೆ ಇಂಟರ್ನೆಟ್ಗೆ ಕಿಚ್ಚು ಹಚ್ಚಿದ್ದಾರೆ. ಆದರೆ ಅದೀಗ ಕಣ್ಸನ್ನೆಯ ವಿಡೀಯೋ ಮೂಲಕವಲ್ಲ.. ಆದರೆದಕ್ಕಿಂತಲೂ ಹಾಟ್ ಆಗಿರುವ ಕಿಸ್ಸಿಂಗ್ ವಿಡಿಯೋ ಮೂಲಕ. ಇಂಟರ್ನೆಟ್ ಲೋಕದಲ್ಲಿ ಪ್ರಿಯಾ ವಾರಿಯರ್ ಕಿಸ್ ಮಾಡು ವಿಡೀಯೋ ಒಂದು ಇದೀಗ ಸೆನ್ಸೇಶನಲ್ ಕ್ರೀಯೆಟ್ ಮಾಡಿದೆ.
ಹೌದು ಪ್ರಿಯಾ ವಾರಿಯರ್ ಹಾಗೂ ಸಹ ನಟ ರೋಶನ್ ಅಬ್ದುಲ್ ರೌಫ್ ಅವರೊಂದಿಗಿನ ಕಿಸ್ಸಿಂಗ್ ದೃಶ್ಯ ಇಂಟರ್ನೆಟ್ಗೆ ಸೋರಿಕೆಯಾಗಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕಿಸ್ಸಿಂಗ್ ದೃಶ್ಯ ವೂ ಇದೇ ಫೆ.14ರ ವೆಲೆಂಟೈನ್ ದಿನ ಬಿಡುಗಡೆ ಕಾಣಲಿರುವ ಪ್ರಿಯಾ ವಾರಿಯರ್ ನಟನೆಯ ಚೊಚ್ಚಲ "ಒರು ಅಡಾರ್ ಲವ್' ಚಿತ್ರದಲ್ಲಿನ ಭಾಗವೇ ಅಥವಾ ಇಲ್ಲವೇ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಕಳೆದ ವರ್ಷ ಕಣ್ಸನ್ನೆಯ ವಿಡಿಯೋ ತುಣುಕಿನಲ್ಲಿರುವ ಪ್ರಿಯಾ ಮತ್ತು ರೋಶನ್ ಯಾವ ಸಮವಸ್ತ್ರದಲ್ಲಿದ್ದಾರೋ ಅದೇ ವಸ್ತ್ರದಲ್ಲಿ ಈ ಲಿಪ್ ಕಿಸ್ಸಿಂಗ್ ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.