ಮಂಗಳೂರು, ಸೆ 06 (DaijiworldNews/HR): ರಾಹುಲ್ ಅಮೀನ್ ನಿರ್ದೇಶನದ ತುಳು ಚಿತ್ರ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತನ್ನ 100 ದಿನಗಳ ಸಂಭ್ರಮಾಚರಣೆ ಸೆ.8ರಂದು ಸಂಜೆ 5 ಗಂಟೆಗೆ ಟೌನ್ಹಾಲ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಈ ಚಿತ್ರವನ್ನು ಆನಂದ್ ಎನ್ ನಿರ್ಮಿಸಿದ್ದು, ಬಿ ಅಶೋಕ್ ಕುಮಾರ್, ಸೀತಾರಾಮ್ ಶೆಟ್ಟಿ, ಅಜಯ್ ಬಾಳಿಗಾ, ಸುಹಾನ್ ಪ್ರಸಾದ್, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ ಮತ್ತು ಅರ್ಪಿತ್ ಅಡ್ಯಾರ್ ಸಹ ನಿರ್ಮಾಪಕರಾಗಿದ್ದಾರೆ.
ವಿನೀತ್ ಕುಮಾರ್, ಯಶಾ ಶಿವಕುಮಾರ್, ಅರವಿಂದ್ ಬೋಳಾರ್, ಕರಿಷ್ಮಾ ಅಮೀನ್, ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರೂಪ ವರ್ಕಾಡಿ, ಮರ್ವಿನ್ ಶಿರ್ವ, ನಮಿತ್ ಕುಳೂರು ಮತ್ತು ರವಿ ರಾಮಕುಂಜ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಮೊದಲ ಬಾರಿಗೆ ತುಳು ಚಲನಚಿತ್ರವು ಮಂಗಳೂರು, ಬೆಂಗಳೂರು, ಮೈಸೂರು, ಪುಣೆ ಮುಂಬೈ ಮತ್ತು ವಡೋದರಾ ಸೇರಿದಂತೆ 6 ಭಾರತೀಯ ನಗರಗಳಲ್ಲಿ ಮತ್ತು ಸೌದಿ ಅರೇಬಿಯಾ, ಯುಎಸ್ಎ, ಬಹ್ರೇನ್, ಕುವೈತ್, ಕತಾರ್, ಯುಎಇ (ಅಬುಧಾಬಿ, ಶಾರ್ಜಾ ಮತ್ತು ದುಬೈನಂತಹ 11 ದೇಶಗಳಲ್ಲಿ ಪ್ರದರ್ಶನಗೊಂಡಿದೆ.
ಯುನೈಟೆಡ್ ಕಿಂಗ್ಡಮ್, ನೈಜೀರಿಯಾ, ಇಸ್ರೇಲ್, ಓಮನ್ ಮತ್ತು ಜಾಂಬಿಯಾ, ಆಸ್ಟ್ರೇಲಿಯಾ, ಕೆನಡಾ, ಓಮನ್, ಕುವೈತ್, ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿಯೂ ಬಿಡುಗಡೆಯಾಗಿದೆ.