ಹೈದರಾಬಾದ್, ಆ 26 (DaijiworldNews/HR): ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಜೋಡಿಯ ಲೈಗರ್ ಸಿನಿಮಾ ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಮೂಡಿಸಿದ್ದು, ಇದೀಗ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎನ್ನಲಾಗಿದೆ.
ಹಲವು ತಿಂಗಳ ಹಿಂದೆ ಲೈಗರ್ ಸಿನಿಮಾದ ವ್ಯಾಪಾರಕ್ಕೆ ಸಂಬಂಧಿಸಿದಂತೆ ವಿಜಯ್ ದೇವರಕೊಂಡ ಟ್ವಿಟ್ ಮಾಡಿದ್ದು, ಅದರಲ್ಲಿ ‘ಓಟಿಟಿ ಸಂಸ್ಥೆಯೊಂದು 200 ಕೋಟಿ ರೂಪಾಯಿಗೆ ಲೈಗರ್ ಸಿನಿಮಾ ಕೇಳಿದ್ದು, ಇದು ಸಣ್ಣ ಮೊತ್ತದ ಹಣ. ಥಿಯೇಟರ್ ನಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಟ್ವಿಟ್ ಮಾಡಿದ್ದು, ಇದೀಗ ಈ ಟ್ವಿಟ್ ಸಖತ್ ವೈರಲ್ ಆಗುತ್ತಿದೆ.
ಇನ್ನು ವಿಜಯ್ ಅವರು ಈ ಟ್ವೀಟ್ ಅನ್ನು ನೆಟ್ಟಿಗರು ಗೇಲಿ ಮಾಡಿದ್ದು, ಅದಕ್ಕೆ ಕಾಮೆಂಟ್ ಗಳ ಸುರಿಮಳೆ ಸುರಿದಿದ್ದು, ಸಖತ್ ವೈರಲ್ ಆಗಿದೆ.