ಮುಂಬೈ, ಅ 25 (DaijiworldNews/MS): ಗರ್ಭಿಣಿಯಾದ ತಮ್ಮ ಪತ್ನಿ ಮತ್ತು ನಟಿ ಅಲಿಯಾ ಭಟ್ ಅವರ ದೇಹ ತೂಕ ಹೆಚ್ಚಳದ ಬಗ್ಗೆ ಕಿಚಾಯಿಸಿದ್ದ ಬಾಲಿವುಡ್ ನಟ ರಣಬೀರ್ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ.
ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಜೋಡಿಯಾಗಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. ಈ ನಿಟ್ಟಿನಲ್ಲಿ ಚೆನ್ನೈನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಕಾರ್ಯಕ್ರಮ ನಡೆಯಿತು. ಈ ವೇಳೆ ತಾವು ಮಾಡಿದ ಕಮೆಂಟ್ ಒಂದರ ಬಗ್ಗೆ ರಣಬೀರ್ ಕಪೂರ್ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ
ಆದರೆ ಇತ್ತೀಚೆಗೆ ಗರ್ಭಾವಸ್ಥೆಯಲ್ಲಿರುವ ಆಲಿಯಾ ಭಟ್ ತೂಕ ಹೆಚ್ಚಿಕೊಳ್ಳುತ್ತಿರುವ ಬಗ್ಗೆ ರಣ್ಬೀರ್ ಕಪೂರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕೆಲವರು ಜೋಕ್ ಆಗಿ ಸ್ವೀಕರಿಸಿದ್ದರೆ ಮತ್ತೆ ಹಲವರಿಗೆ ಹಿಡಿಸಿಲ್ಲ." ಆ ಕಮೆಂಟ್ ಜೋಕ್ ಅಷ್ಟೇ ಆಗಿತ್ತು.ಆ ಕಮೆಂಟ್ ಜೋಕ್ ಅಷ್ಟೇ ಆಗಿತ್ತು. ಆದರೆ, ಅದು ತಮಾಷೆಯಾಗಲಿಲ್ಲ. ನನ್ನ ಜೋಕ್ ಯಾರನ್ನೂ ನೋಯಿಸುವ ಉದ್ದೇಶದ್ದಾಗಿರಲಿಲ್ಲ. ಇದು ನನ್ನ ಕೆಟ್ಟ ಹಾಸ್ಯಪ್ರಜ್ಞೆಯಾಗಿದೆ " ಎಂದು ಕ್ಷಮೆಯಾಚಿಸಿದ್ದಾರೆ.