ಮುಂಬೈ, ಆ 24 (DaijiwroldNews/HR): ನಟಿ ಆತಿಯಾ ಶೆಟ್ಟಿ ಮತ್ತು ಕ್ರಿಕೆಟರ್ ಕೆಎಲ್ ರಾಹುಲ್ ಇವರಿಬ್ಬರ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿದ್ದು, ಈ ಜೋಡಿಯ ವಿವಾಹದ ಕುರಿತು ನಟ ಸುನೀಲ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಈ ಇಬ್ಬರೂ ಕೆಲವು ತಿಂಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಮಾಧ್ಯಮಗಳ ಮುಂದೆ ತಮ್ಮ ಪ್ರೇಮದ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದರು.
ಇನ್ನು ಆತಿಯಾ ಶೆಟ್ಟಿ ತಂದೆ ಮತ್ತು ನಟ ಸುನೀಲ್ ಶೆಟ್ಟಿ ಈ ಜೋಡಿಯ ವಿವಾಹದ ಕುರಿತು ಪ್ರತಿಕ್ರಿಯಿಸಿದ್ದು, ಮಕ್ಕಳ ನಿರ್ಧಾರ ಮಾಡಿದ ತಕ್ಷಣ ತಯಾರಿ ಶುರುವಾಗುತ್ತಿದೆ ಎಂದಿದ್ದಾರೆ.
ಆತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಳೆದ ಹಲವು ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.