ಮುಂಬೈ, ಆ 11 (DaijiworldNews/HR): ಬಾಲಿವುಡ್ನ ಜೋಡಿಹಕ್ಕಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ನಲ್ಲಿದ್ದು ಅವರಿಬ್ಬರ ಮದುವೆ ವಿಚಾರ ಸದಾ ಸುದ್ದಿಯಲ್ಲಿದ್ದು, ಇದೀಗ ಈ ವಿಚಾರದಲ್ಲಿ ಅರ್ಜುನ್ ಮೌನ ಮುರಿದಿದ್ದಾರೆ.
ಕಾಫಿ ವಿತ್ ಕರಣ್ 7ನ ಆರನೇ ವಿಶೇಷ ಸಂಚಿಕೆಯಲ್ಲಿ ಸಹೋದರ ಅರ್ಜುನ್ ಕಪೂರ್ ಮತ್ತು ಸಹೋದರಿ ಸೋನಮ್ ಕಪೂರ್ ಜೋಡಿ ಕಾಣಿಸಿಕೊಂಡಿದ್ದು, ಈ ವೇಳೆ ಕರಣ್ ಕೇಳಿರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಮದುವೆ ಬಗ್ಗೆ ಕರಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರ್ಜುನ್ ಕಪೂರ್, ಸದ್ಯದಲ್ಲಿಯೇ ಮದುವೆಯಾಗುವ ಯೋಚನೆ ಇಲ್ಲ. ನನ್ನ ಗಮನವೀಗ ಸಂಪೂರ್ಣ ವೃತ್ತಿಜೀವನದ ಮೇಲಿದೆ ಎಂದಿದ್ದಾರೆ.
ಇನ್ನು ಮಲೈಕಾ ಅವರೊಂದಿಗಿನ ಸಂಬಂಧವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಏಕೆ ಇಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರ್ಜುನ್, ನಾನು ಅವಿಭಕ್ತ ಕುಟುಂಬದಲ್ಲಿ ಬೆಳೆದಿದ್ದೇನೆ. ಇದರ ಪರಿಣಾಮ ಏನಾಗುತ್ತಿದೆ ಎಂಬುದನ್ನು ನೋಡುವುದು ಅಷ್ಟು ಸುಲಭವಲ್ಲದ ಮಾತು. ಎಲ್ಲವೂ ನಾನು ಮಲೈಕಾ ಮೇಲೆ ಹೊಣೆ ಹೊರಿಸಲು ಸಾಧ್ಯವಿಲ್ಲ ಎಂದಿದ್ದಾರೆ.