ಮುಂಬೈ, ಆ 10 (DaijiworldNews/MS): ನಟ ಆಮಿರ್ ಖಾನ್ ನಟಿಸಿರುವ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಅಭಿಯಾನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಖಾನ್ ಅವರು ದೇಶದ ಜನತೆಯ ಕ್ಷಮೆ ಕೇಳಿದ್ದಾರೆ.
"ಯಾವುದೇ ರೀತಿಯಲ್ಲಿ ನಾನು ಯಾರ ಭಾವನೆಗಾದರೂ ಧಕ್ಕೆ ತಂದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾರನ್ನೂ ನೋಯಿಸಲು ನಾನು ಬಯಸುವುದಿಲ್ಲ. ಯಾರಿಗಾದರೂ ನನ್ನ ಸಿನಿಮಾ ನೋಡಲು ಇಷ್ಟವಿಲ್ಲ ಎಂದಾದರೆ ಅವರ ಭಾವನೆಯನ್ನೂ ನಾನು ಗೌರವಿಸುತ್ತೇನೆ" ಎಂದು ಆಮಿರ್ ಖಾನ್ ಹೇಳಿಕೆ ನೀಡಿದ್ದಾರೆ.
"ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ ನೆಲೆಸೋಣ ಎಂದು ಪತ್ನಿ ಹೇಳಿದ್ದಳು" ಎಂದು ಹಲವು ವರ್ಷದ ಹಿಂದೆ ಆಮಿರ್ ಖಾನ್ ಹೇಳಿದ್ದನ್ನು ಜನರು ಈಗಲೂ ಮರೆತಿಲ್ಲ. ಹೀಗಾಗಿ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ನೆಟ್ಟಿಗರು ಅಭಿಯಾನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಆಮಿರ್ ಖಾನ್ ಕ್ಷಮೆ ಕೇಳಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗುತ್ತಿದೆ.